ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಕುಂದೂರು–ನೆಲಹೊನ್ನೆ ತಾಂಡಾದ ನಡುವೆ ಶುಕ್ರವಾರ ಬೈಕ್‌ನಿಂದ ಬಿದ್ದು ಯುವಕರೊಬ್ಬರು ಮೃತಪಟ್ಟಿದ್ದಾರೆ.
ಚನ್ನಗಿರಿ ತಾಲ್ಲೂಕಿನ ದೊಡ್ಡಘಟ್ಟ ಗ್ರಾಮದ ಅಬು ತಾಲಿಬ್ ಇಬ್ರಾಹಿಂ (22) ಮೃತಪಟ್ಟ ಯುವಕ.
ಮಲೇಬೆನ್ನೂರಿನಿಂದ ದೊಡ್ಡಘಟ್ಟ ಗ್ರಾಮಕ್ಕೆ ಬೈಕ್‌ನಲ್ಲಿ ಬರುತ್ತಿದ್ದಾಗ ಕುಂದೂರು–ನೆಲಹೊನ್ನೆ ತಾಂಡಾ ಬಳಿ ಅತಿ ವೇಗವಾಗಿ ಬೈಕ್ ಚಲಾಯಿಸಿದ ಕಾರಣ ಬಿದ್ದು ಗಾಯಗೊಂಡಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.