ನ್ಯಾಮತಿ: ತಾಲೂಕಿನ ಕೆಂಚಿನಕೊಪ್ಪ (Kenchinakoppa) ಗ್ರಾಮದಿಂದ ಗುರುವಾರ ರಾತ್ರಿ ಬೈಕ್‌ನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದ ಯುವಕನೊಬ್ಬ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
ಅರುಣಾಚಾರ್ (22) ಮೃತಪಟ್ಟವರು. ಇವರು ಗ್ರಾಮದ ಅಣ್ಣಪ್ಪಾಚಾರ್ (ರಾಜು) ಮತ್ತು ಕೆಂಚಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯೆ ಮಮತಾ ಅವರ ಪುತ್ರರಾಗಿದ್ದು, ಬೆಂಗಳೂರಿನಲ್ಲಿದ್ದ ಸಹೋದರಿಯರ ಮನೆಗೆ ಹೊರಟಿದ್ದರು.
ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಅತಿ ವೇಗವಾಗಿ ಬೈಕ್ ಚಾಲನೆ ಮಾಡಿ ಅಪಘಾತ (bike accident) ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ತಿಪಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.