ಹೊನ್ನಾಳಿ : ಮುಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್ ಬೇಡ ಬೇರೆಯವರಿಗೆ ಕೊಟ್ರೂ ಅವರನ್ನು ಗೆಲ್ಲಿಸುತ್ತೇನೆ ಎಂದು ರೇಣುಕಾಚಾರ್ಯ ಶನಿವಾರ ಪಟ್ಟಣದಲ್ಲಿ ಹೇಳಿದರು.
ಈ ಬಾರಿ ಚುನಾವಣೆಯಲ್ಲಿ ಗುಜರಾತ್ ಮಾದರಿ ಅನುಸರಿಸುತ್ತಾರೆ..ಹೊಸಬರಿಗೆ ಟಿಕೆಟ್ ನೀಡುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಇಲ್ಲಿ ಯಾವುದೇ ಗುಜರಾತ್ ಮಾದರಿ ಸರಕಾರ ನಡೆಯೋದಿಲ್ಲ. ನನಗೆ ಟಿಕೆಟ್ ಬೇಡ. ಐದು ವರ್ಷದಿಂದ ಕ್ಷೇತ್ರದಲ್ಲಿದ್ದೇನೆ. ನನಗೆ ಸೋಲಿನ ಭೀತಿ ಇಲ್ಲ, 30 ಸಾವಿರ ಮತಗಳಿಂದ ಗೆಲ್ಲುತ್ತೇನೆ. 2013ರಲ್ಲಿ ನಮ್ಮ ಪಕ್ಷ ಮೂರು ಭಾಗ ಆಗಿದ್ದರಿಂದ ಸೋಲಾಯಿತು. ನಾಲ್ಕನೇ ಬಾರಿ ನನ್ನ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ನನ್ನನ್ನು ಕ್ಷೇತ್ರದ ಜನ ಗೆಲ್ಲಿಸುತ್ತಾರೆ. ಮಾಜಿ ಶಾಸಕ ಡಿಜಿ ಶಾಂತನಗೌಡ ಅವರು ಡ್ರಾಮಾ ಮಾಡುತ್ತಿದ್ದಾರೆ. ಅವರಿಗೆ ಸೋಲಿನ ಭೀತಿ ಇದೆ ಎಂದರು.