Home ಕುಂಠಿತಗೊಂಡ ಮಳೆ, ಇಳಿಕೆ ಕಂಡ ಒಳಹರಿವು: ಭದ್ರಾ ಜಲಾಶಯ ಭರ್ತಿಯಾಗುವುದು ಈ ವರ್ಷ ಅನುಮಾನ? ಹೊರಹರಿವು, ಒಳಹರಿವು ಎಷ್ಟು?
Home

ಕುಂಠಿತಗೊಂಡ ಮಳೆ, ಇಳಿಕೆ ಕಂಡ ಒಳಹರಿವು: ಭದ್ರಾ ಜಲಾಶಯ ಭರ್ತಿಯಾಗುವುದು ಈ ವರ್ಷ ಅನುಮಾನ? ಹೊರಹರಿವು, ಒಳಹರಿವು ಎಷ್ಟು?

Share
ಭದ್ರಾ ಜಲಾಶಯ
Share

ದಾವಣಗೆರೆ: ಭದ್ರಾ ಜಲಾನಯನ ಮತ್ತು ಮಲೆನಾಡಿನಲ್ಲಿ ಮಳೆ ಕುಂಠಿತವಾಗಿದ್ದು, ಭದ್ರಾ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಕಡಿಮೆಯಾಗಿದೆ. ಇನ್ನು ಡ್ಯಾಂನಿಂದ 2413 ಕ್ಯೂಸೆಕ್ ಹೊರ ಹರಿವಿದ್ದರೆ, ಒಳಹರಿವು 2980 ಕ್ಯೂಸೆಕ್ ಇದೆ. ಜಲಾಶಯದ ಇಂದಿನ ನೀರಿನ ಮಟ್ಟ 178.8 ಅಡಿ ಇದೆ.

ಭದ್ರಾ ಜಲಾಶಯದಿಂದ ಹೆಚ್ಚು ನೀರು ಹೊರ ಬಿಡುತ್ತಿರುವುದರಿಂದ ಈ ವರ್ಷ ಭದ್ರಾ ಡ್ಯಾಂ ಭರ್ತಿಯಾಗುವುದು ಅನುಮಾನ. ಭದ್ರಾ ಮೇಲ್ದಂಡೆ ಯೋಜನೆಯಡಿ ಈಗಾಗಲೇ ಚಿತ್ರದುರ್ಗಕ್ಕೆ ಕಾಲುವೆಗಳ ಮೂಲಕ
ನೀರು ಹರಿಸಲಾಗುತ್ತಿದೆ. ಅದರಂತೆ ಬಲದಂಡೆ ನಾಲೆಗೆ 1500 ಕ್ಯೂಸೆಕ್ ಹೊರಬಿಡಲಾಗುತ್ತಿದೆ. ಇದರಿಂದಾಗಿ ಜಲಾಶಯದ ನೀರಿನ ಮಟ್ಟ ಹೆಚ್ಚಾಗಿಲ್ಲ.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ

ಗರಿಷ್ಠ ಮಟ್ಟ: 186 ಅಡಿ

ಇಂದಿನ ನೀರಿನ ಮಟ್ಟ: 178.8 ಅಡಿ

ಒಳಹರಿವು: 2980 ಕ್ಯೂಸೆಕ್

ಹೊರ ಹರಿವು: 2413 ಕ್ಯೂಸೆಕ್

ಭದ್ರಾ ಬಲದಂಡೆ ನಾಲೆ: ಹೊರ ಹರಿವು 1500 ಕ್ಯೂಸೆಕ್

ಕೆಪಾಸಿಟಿ: 69.553 ಕ್ಯೂಸೆಕ್

ಕಳೆದ ವರ್ಷ ಇದೇ ದಿನ: 184.5 ಅಡಿ

ಒಳಹರಿವು: 1,28,77 ಕ್ಯೂಸೆಕ್

ಹೊರ ಹರಿವು: 11,785 ಕ್ಯೂಸೆಕ್

ಒಟ್ಟಿನಲ್ಲಿ ದಾವಣಗೆರೆ ಜಿಲ್ಲೆಯ ರೈತರು ಭದ್ರಾ ಡ್ಯಾಂನಿಂದ ನೀರು ಹರಿಸುವಂತೆ ಒತ್ತಾಯಿಸಿ ದಾವಣಗೆರೆ ಬಂದ್ ನಡೆಸಿದರೂ ಪ್ರಯೋಜನವಾಗಿಲ್ಲ. ರಾಜ್ಯ ಸರ್ಕಾರವು ಚಿತ್ರದುರ್ಗಕ್ಕೆ ಮತ್ತು ಭದ್ರಾ ಬಲದಂಡೆ ನಾಲೆಗೆ ನೀರು ಹರಿಸಿದೆ. ರೈತರು ಭತ್ತ, ಮೆಕ್ಕೆಜೋಳ ಬೆಳೆಗೆ ನೀರು ಹರಿಸುವಂತೆ ಒತ್ತಾಯಿಸಿದ್ದರೂ ಕ್ಯಾರೇ ಎನ್ನದ ರಾಜ್ಯ ಸರ್ಕಾರದ ನಡೆಗೆ ಜಿಲ್ಲೆಯ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles

ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ದಾವಣಗೆರೆ: ಕರ್ನಾಟಕ ಸವಿತಾ ಸಮಾಜ ಅಭಿವೃದ್ದಿ ನಿಗಮ ನಿಯಮಿತ ವತಿಯಿಂದ ಪ್ರಸಕ್ತ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ...

ಚಿತ್ರದುರ್ಗಕ್ಕೆ ಹರಿಯಲಿದೆ ‘ಭದ್ರೆ’: ಸೆ.6ರಿಂದ ಭದ್ರಾ ಮೇಲ್ದಂಡೆ ಯೋಜನೆಗೆ ಚಿತ್ರದುರ್ಗಕ್ಕೆ ಭದ್ರಾ ನೀರು ಹರಿಸಲು ನಿಗಮ ಮುಹೂರ್ತ ಫಿಕ್ಸ್!

ದಾವಣಗೆರೆ: ವಿಶ್ವೇಶ್ವರಯ್ಯ ಜಲ ನಿಗಮವು ಸರ್ಕಾರದ ಆದೇಶದನ್ವಯ ಸೆ.6ರಿಂದ ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆ...

ಭದ್ರಾ ಜಲಾಶಯ ಭರ್ತಿಗೆ ಇನ್ನು 7.4 ಅಡಿ ಬಾಕಿ; ಸಿಇಸಿ ಸಭೆ ವಿಳಂಬಕ್ಕೆ ರೈತರು ಕೆಂಡ!

ದಾವಣಗೆರೆ: ಭದ್ರಾ ಜಲಾನಯನ ಪ್ರದೇಶ ಮತ್ತು ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದ್ದು. ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ...

ಅಂಚೆ ಇಲಾಖೆಯಲ್ಲಿ ಕೆಲಸ ಬಯಸುತ್ತಿದ್ದೀರಾ? ಹಾಗಿದ್ದರೆ ದಾವಣಗೆರೆಯಲ್ಲಿಯೂ ಇದೆ ನೋಡಿ ಅವಕಾಶ, ಮಿಸ್ ಮಾಡ್ಕೋಬೇಡಿ!

ದಾವಣಗೆರೆ: ಅಂಚೆ ಇಲಾಖೆಯಲ್ಲಿ ಕೆಲಸ ಇದೆ ಎಂದರೆ ಯಾರು ಬೇಡ ಎನ್ನುತ್ತಾರೆ. ಅದರಲ್ಲಿಯೂ ಕೇಂದ್ರದ ಅಂಚೆ...

ಫಾಲೋ
ಮಾಡಿ