Home ದಾವಣಗೆರೆ ಇಂದಿನ ಭದ್ರಾ ಡ್ಯಾಂ ನೀರಿನ ಮಟ್ಟ ಎಷ್ಟು? ಒಳಹರಿವಿನಲ್ಲಿ ಯಥಾಸ್ಥಿತಿ
ದಾವಣಗೆರೆ

ಇಂದಿನ ಭದ್ರಾ ಡ್ಯಾಂ ನೀರಿನ ಮಟ್ಟ ಎಷ್ಟು? ಒಳಹರಿವಿನಲ್ಲಿ ಯಥಾಸ್ಥಿತಿ

Share
ಭದ್ರಾ ಡ್ಯಾಂ
Share

ದಾವಣಗೆರೆ: ಭದ್ರಾ ಜಲಾನಯನ ಪ್ರದೇಶ ಮತ್ತು ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾದ ಕಾರಣ ಭದ್ರಾ  ಡ್ಯಾಂ ಒಳಹರಿವಿನಲ್ಲಿ ಯಥಾ ಸ್ಥಿತಿ ಇದೆ. ಡ್ಯಾಂಗೆ ಇಂದು 2847 ಕ್ಯೂಸೆಕ್ ಒಳಹರಿವಿದೆ. ಹೊರ ಹರಿವಿನಲ್ಲಿ ಹೆಚ್ಚಳವಾಗಿದ್ದು, ಜಲಾಶಯದಿಂದ 1700 ಕ್ಯೂಸೆಕ್ ಹೊರ ಹರಿವಿದೆ.

ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಕಡಿಮೆಯಾಗಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದೆ. ಒಳಹರಿವು 2847 ಕ್ಯೂಸೆಕ್ ಇದ್ದರೆ, ಬಲದಂಡೆ ನಾಲೆಯಲ್ಲಿ 1500 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದ ನೀರಿನ ಮಟ್ಟ ಕಡಿಮೆ ಇದೆ. ಜಲಾಶಯ ಭರ್ತಿಗೆ ಇನ್ನು ಕೇವಲ 7.5 ಅಡಿ ನೀರು ಮಾತ್ರ ಬರಬೇಕು.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ:

ಜಲಾಶಯದ ಇಂದಿನ ನೀರಿನ ಮಟ್ಟ: 178.7 ಅಡಿ

ಒಳಹರಿವು: 2847ಕ್ಯೂಸೆಕ್

ಭದ್ರ ಬಲದಂಡೆ ನಾಲೆಗೆ: 1500 ಕ್ಯೂಸೆಕ್

ಸ್ಟೋರೇಜ್ ಕೆಪಾಸಿಟಿ: 62.507 ಟಿಎಂಸಿ

ಇದೇ ದಿನ ಜಲಾಶಯದ ಕಳೆದ ವರ್ಷದ ನೀರಿನ ಮಟ್ಟ:

ನೀರಿನ ಮಟ್ಟ: 184.3 ಅಡಿ

ಒಳ ಹರಿವು: 16,534 ಕ್ಯೂಸೆಕ್

ಹೊರ ಹರಿವು: 14,138 ಕ್ಯೂಸೆಕ್

ಭದ್ರಾ ಮೇಲ್ದಂಡೆ ಯೋಜನೆಯಡಿ ನಾಳೆಯಿಂದ ಚಿತ್ರದುರ್ಗಕ್ಕೆ ನೀರು ಹರಿಸಲು ತೀರ್ಮಾನಿಸಲಾಗಿದ್ದು, ನಾಳೆಯಿಂದ ಡ್ಯಾಂನ ನೀರಿನ ಮಟ್ಟ ಕುಸಿತ ಆಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ ಸುಮಾರು ಆರು ಅಡಿ ನೀರು ಕಡಿಮೆಯಿದೆ. ದಾವಣಗೆರೆ ಜಿಲ್ಲೆಯ ರೈತರು ಭದ್ರಾ ಡ್ಯಾಂನಿಂದ ನೀರು ಹರಿಸುವಂತೆ ಒತ್ತಾಯಿಸಿದ್ದರೂ ಕಾಡಾ ಮಾತ್ರ ಇದುವರೆಗೆ ಕ್ರಮ ಕೈಗೊಂಡಿಲ್ಲ. ರೈತರು ದಾವಣಗೆರೆ ಬಂದ್, ಹೋರಾಟ, ಪ್ರತಿಭಟನೆ ನಡೆಸಿದ್ದರೂ ಸಿಇಸಿ ಸಭೆ ನಡೆಸಿ ನೀರು ಹರಿಸಲು ತೀರ್ಮಾನ ತೆಗೆದುಕೊಳ್ಳದೇ ಇರುವುದು ರೈತರನ್ನು ಕೆರಳುವಂತೆ ಮಾಡಿದೆ.

Share

Leave a comment

Leave a Reply

Your email address will not be published. Required fields are marked *

Related Articles

ಗ್ರಾಮೀಣ ಭಾಗಗಳಲ್ಲಿ ಹೃದ್ರೋಗ ಸೇರಿದಂತೆ ಜೀವನಶೈಲಿ ಕಾಯಿಲೆಗಳು ಹೆಚ್ಚುತ್ತಿರುವುದು ಆತಂಕಕಾರಿ: ಡಾ. ಟಿ. ಜಿ. ರವಿಕುಮಾರ್

ದಾವಣಗೆರೆ: ನಲ್ಕುಂದ ಗ್ರಾಮದಲ್ಲಿ ಸಂತೋಷ್ ಕುಮಾರ್ ಅವರ ಸಹಕಾರದೊಂದಿಗೆ ಪ್ರೀತಿ ಆರೈಕೆ ಟ್ರಸ್ಟ್ ಹಾಗೂ ಆರೈಕೆ ಸೂಪರ್...

ಚಿತ್ರದುರ್ಗಕ್ಕೆ ಹರಿಯಲಿದೆ ‘ಭದ್ರೆ’: ಸೆ.6ರಿಂದ ಭದ್ರಾ ಮೇಲ್ದಂಡೆ ಯೋಜನೆಗೆ ಚಿತ್ರದುರ್ಗಕ್ಕೆ ಭದ್ರಾ ನೀರು ಹರಿಸಲು ನಿಗಮ ಮುಹೂರ್ತ ಫಿಕ್ಸ್!

ದಾವಣಗೆರೆ: ವಿಶ್ವೇಶ್ವರಯ್ಯ ಜಲ ನಿಗಮವು ಸರ್ಕಾರದ ಆದೇಶದನ್ವಯ ಸೆ.6ರಿಂದ ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆ...

ದಾವಣಗೆರೆಯಲ್ಲಿ ಹಸಿ ಅಡಿಕೆ, ಚನ್ನಗಿರಿಯ ಅಡಿಕೆ ಮಾರುಕಟ್ಟೆಯ ಇಂದಿನ ಧಾರಣೆ ಎಷ್ಟು: ಕಂಪ್ಲೀಟ್ ಡೀಟೈಲ್ಸ್

ದಾವಣಗೆರೆ: ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಅಲ್ಪ ಪ್ರಮಾಣದ ಕುಸಿತ ಕಂಡು ಬಂದಿದೆ. ರಾಜ್ಯ...

ನ್ಯೂಜೆರ್ಸಿಯಲ್ಲಿ ಸಿರಿಗೆರೆ ಶ್ರೀಗಳಿಗೆ ಭಕ್ತಿಪೂರ್ವಕ ಪಾದಪೂಜೆ: ರಘುಕುಮಾರ್ – ರಂಜಿತಾ ಎಸ್.ಆರ್. ನಿವಾಸದಲ್ಲಿ ದಂಪತಿಯಿಂದ ಭಕ್ತಿಪೂರ್ವಕ ಸೇವೆ, ನೂರಾರು ಭಕ್ತರ ಭಾಗಿ

ನ್ಯೂಜೆರ್ಜಿ: ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ...

ಫಾಲೋ
ಮಾಡಿ