ದಾವಣಗೆರೆ: ಅಂಚೆ ಇಲಾಖೆಯಲ್ಲಿ ಕೆಲಸ ಇದೆ ಎಂದರೆ ಯಾರು ಬೇಡ ಎನ್ನುತ್ತಾರೆ. ಅದರಲ್ಲಿಯೂ ಕೇಂದ್ರದ ಅಂಚೆ ಇಲಾಖೆಯ ಉದ್ಯೋಗ ಎಂದರೆ ಕೈತುಂಬಾ ಸಂಬಳ ಸಿಕ್ಕೇ ಸಿಗುತ್ತೆ. ಹಾಗಾಗಿ, ಅಂಚೆ ಇಲಾಖೆ ಉದ್ಯೋಗದ ನಿರೀಕ್ಷೆಯಲ್ಲಿರುತ್ತಾರೆ. ಅಂಥವರಿಗೆ ಒಂದು ಸುವರ್ಣಾವಕಾಶ ಒದಗಿ ಬಂದಿದೆ.
ಕೇಂದ್ರೀಯ ಅಂಚೆ ಇಲಾಖೆಯು ಭಾರತಾದ್ಯಂತ ಒಟ್ಟು 23,757 ಹುದ್ದೆಗಳಿಗೆ ಅರ್ಜಿ ಕರೆದಿದೆ. ಇದರಲ್ಲಿ ಕರ್ನಾಟಕಕ್ಕೆ 1,116 ಹುದ್ದೆಗಳನ್ನು ಮೀಸಲಿಟ್ಟಿದೆ. ಅದರಂತೆ ದಾವಣಗೆರೆ ಜಿಲ್ಲೆಯಲ್ಲಿಯೂ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ದಾವಣಗೆರೆ ಜಿಲ್ಲೆಯ ಒಟ್ಟು 19 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಅರ್ಜಿ ಸಲ್ಲಿಕೆ ಮಾಡಬಹುದು.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಯಾವ ಹುದ್ದೆ?
ಶಾಖಾ ಅಂಚೆ ಪಾಲಕ
ಸಹಾಯಕ ಶಾಖಾ ಅಂಚೆ ಪಾಲಕ
ಮತ್ತು ಡಾಕ್ ಸೇವಕ್ ಹುದ್ದೆಗಳು
ಎಲ್ಲಿ ಅರ್ಜಿ ಸಲ್ಲಿಸಬೇಕು?
ಆನ್‍ಲೈನ್ ಮೂಲಕ
ಕೊನೆ ದಿನಾಂಕ:
ಸೆಪ್ಟೆಂಬರ್ 19, 2026, ಅರ್ಜಿ ಸಲ್ಲಿಸಲು ಕೊನೆಯ ದಿನ
ಅಧಿಕೃತ ಲಿಂಕ್:
https://indiapost.gov.in/gdsonlineengagement ಸಲ್ಲಿಸಬೇಕು.
ಅರ್ಹತೆ ಏನು?
ಎಲ್ಲಾ ಹುದ್ದೆಗಳಿಗೆ 10ನೇ ತರಗತಿ ತೇರ್ಗಡೆ ಕಡ್ಡಾಯ.
ಇಂಗ್ಲೀಷ್ ಮತ್ತು ಗಣಿತದಲ್ಲಿ ಉತ್ತೀರ್ಣ ಅಂಕಗಳೊಂದಿಗೆ 10ನೇ ತರಗತಿಯಲ್ಲಿ, ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು.
ವಯಸ್ಸು 18 ಮತ್ತು ಗರಿಷ್ಟ 40 ವರ್ಷಗಳ ವಯೋಮಾನದವರಾಗಿರಬೇಕು.
10ನೇ ತರಗತಿಯಲ್ಲಿ ಪಡೆದ ಅಂಕಗಳ (ಮೆರಿಟ್) ಆಧಾರದಲ್ಲಿ ಆನ್‍ಲೈನ್ ಮೂಲಕವೇ ನೇಮಕಾತಿ ನಡೆಯುತ್ತದೆ.
ಹೆಚ್ಚಿನ ಮಾಹಿಗಾಗಿ ಸಮೀಪದ ಯಾವುದೇ ಅಂಚೆ ಕಚೇರಿಯನ್ನು ಅಥವಾ ಮೇಲೆ ತಿಳಿಸಿದ ವೆಬ್ ಸೈಟ್ ಲಿಂಕ್‍ನ್ನು ಸಂಪರ್ಕಿಸಬಹುದು.
Leave a comment