Home “ಇಳೆಯ ತರಳರಿಗೆ ಬಾಳು ಕಲಿಸಿದ ಸಂತಶ್ರೇಷ್ಠರಿಗೆ ಶ್ರದ್ಧಾಂಜಲಿ” ಸಿರಿಗೆರೆಯಲ್ಲಿ ಸೆಪ್ಟೆಂಬರ್ 24 ರಂದು ಪುಣ್ಯ ಸ್ಮರಣೆ
Homeದಾವಣಗೆರೆ

“ಇಳೆಯ ತರಳರಿಗೆ ಬಾಳು ಕಲಿಸಿದ ಸಂತಶ್ರೇಷ್ಠರಿಗೆ ಶ್ರದ್ಧಾಂಜಲಿ” ಸಿರಿಗೆರೆಯಲ್ಲಿ ಸೆಪ್ಟೆಂಬರ್ 24 ರಂದು ಪುಣ್ಯ ಸ್ಮರಣೆ

Share
ಸಿರಿಗೆರೆ
Share

ದಾವಣಗೆರೆ: ಸಮಾಜದ ಅಜ್ಞಾನಕ್ಕೆ ಜ್ಞಾನದ ಬೆಳಕು, ಅಸಮಾನತೆಗೆ ಸಮತೆಯ ದಾರಿ, ಹಸಿದವರಿಗೆ ಅನ್ನ, ನಿರ್ಗತಿಕರಿಗೆ ಆಸರೆ ಹಾಗೂ ಗ್ರಾಮೀಣ ಜನತೆಗೆ ಅಕ್ಷರದ ಬೆಳಕು ನೀಡಿದ ಸಮಾಜಾಭ್ಯುದಯದ ನಿರ್ಮಾತೃ, ಶತಮಾನದ ಸಂತಶ್ರೇಷ್ಠ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ 20 ನೆಯ ಪೀಠಾಧಿಪತಿಗಳು,ಶ್ರೀ ಮದುಜ್ಜಯನಿ ಸದ್ಧರ್ಮ ಸಿಂಹಾಸನಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಪುಣ್ಯಸ್ಮರಣೆಯ ಅಂಗವಾಗಿ 35 ನೆ ಶ್ರದ್ಧಾಂಜಲಿ ಭಿತ್ತಿಪತ್ರವನ್ನು ಬಿಡುಗಡೆಗೊಂಡಿದೆ.

ಬಸವತತ್ತ್ವವನ್ನು ಕೇವಲ ಬೋಧಿಸದೆ ಬದುಕಿನಲ್ಲಿ ಅಳವಡಿಸಿಕೊಂಡು, ಕಾಯಕ–ದಾಸೋಹ, ಸಮಾನತೆ–ಮಾನವೀಯತೆ ಹಾಗೂ ಜ್ಞಾನ–ವೈಚಾರಿಕತೆಯನ್ನು ಸಮಾಜಮುಖಿ ಬದುಕಿನ ಧ್ಯೇಯವನ್ನಾಗಿಸಿದ ಮಹಾಗುರುವಿನ ಆದರ್ಶಗಳು ಇಂದಿಗೂ ಅಸಂಖ್ಯಾತ ಜನರಿಗೆ ದಾರಿದೀಪವಾಗಿವೆ.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ ಸಮಾನತೆ, ವಚನಪ್ರಸಾರ ಹಾಗೂ ಜನಜಾಗೃತಿಯ ಕ್ಷೇತ್ರಗಳಲ್ಲಿ ಅವರು ಬಿತ್ತಿದ ಮೌಲ್ಯಗಳೇ ಅವರ ಅಮರ ಸ್ಮಾರಕಗಳು.

ಭೌತಿಕವಾಗಿ ಗುರುಗಳು ನಮ್ಮೊಂದಿಗಿಲ್ಲದಿದ್ದರೂ, ಅವರ ಚಿಂತನೆ, ಆದರ್ಶ ಮತ್ತು ಸಮಾಜಮುಖಿ ಸೇವೆಯ ಬೆಳಕು ಎಂದಿಗೂ ನಂದುವುದಿಲ್ಲ.

ಈ ಶ್ರದ್ಧಾಂಜಲಿ ಭಿತ್ತಿಪತ್ರವು ಕೇವಲ ಒಂದು ಸ್ಮರಣೆಯ ಸಂಕೇತವಲ್ಲ; ಮಹಾಗುರುವಿನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನುಡಿನಮನದ ದೀಪವಾಗಿದೆ.

“ಶಿವಕುಮಾರರೆಂಬ ಕ್ರಾಂತಿಯ ಜ್ಯೋತಿಗೆ ಕೊನೆಯೆಂಬುದಿಲ್ಲ ಸಾವೆಂಬುದಿಲ್ಲ… ಅದು ಜನಮಾನಸದ ಹೃದಯದಲ್ಲಿ ಎಂದೆಂದಿಗೂ ಬೆಳಗುವ ಅಮರ ಜ್ಯೋತಿ!”

Share

Leave a comment

Leave a Reply

Your email address will not be published. Required fields are marked *

Related Articles

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ: ವಿವಿಧ ಯೋಜನೆಯಗಳಿಗೆ ಸಾಲ ಸೌಲಭ್ಯ

ದಾವಣಗೆರೆ: ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ನಿಯಮಿತ ವತಿಯಿಂದ ಪ್ರಸಕ್ತ ಸಾಲಿನಲ್ಲಿ...

ದಾವಣಗೆರೆಯ ಟೀಂ ಅಕಾಡೆಮಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯದ್ದು ಆತ್ಮಹತ್ಯೆಯೋ… ಅಸಹಜ ಸಾವೋ…?

ದಾವಣಗೆರೆ: ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ನಲ್ಲಿನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ...

ಅಂಚೆ ಇಲಾಖೆಯಲ್ಲಿ ಕೆಲಸ ಬಯಸುತ್ತಿದ್ದೀರಾ? ಹಾಗಿದ್ದರೆ ದಾವಣಗೆರೆಯಲ್ಲಿಯೂ ಇದೆ ನೋಡಿ ಅವಕಾಶ, ಮಿಸ್ ಮಾಡ್ಕೋಬೇಡಿ!

ದಾವಣಗೆರೆ: ಅಂಚೆ ಇಲಾಖೆಯಲ್ಲಿ ಕೆಲಸ ಇದೆ ಎಂದರೆ ಯಾರು ಬೇಡ ಎನ್ನುತ್ತಾರೆ. ಅದರಲ್ಲಿಯೂ ಕೇಂದ್ರದ ಅಂಚೆ...

ಭದ್ರಾ ಡ್ಯಾಂ ನೀರು ಆಶ್ರಯಿಸಿರುವ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಬೆಳೆಗಾರರಿಗೆ ಶಾಕ್!

ದಾವಣಗೆರೆ: ಭದ್ರಾ ಡ್ಯಾಂ ನೀರು ನಂಬಿಕೊಂಡು ದಾವಣಗೆರೆ ಜಿಲ್ಲೆಯ ಶೇಕಡಾ 70ರಷ್ಟು ಬೆಳೆ ಬೆಳೆಯುತ್ತಾರೆ. ಅಡಿಕೆ,...