ದಾವಣಗೆರೆ: ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕಳೆದ ಕೆಲ ದಿನಗಳ ಹಿಂದೆ ನ್ಯಾಮತಿ ಎಸ್‌ಬಿಐ ಬ್ಯಾಂಕ್ ದರೋಡೆ, ದಾವಣಗೆರೆಯ ಚಿನ್ನಾಭರಣ ಅಂಗಡಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಗಳು ನಡೆದಿದ್ದು. ಈ ಘಟನೆಗಳು ಮಾಸುವ ಮುನ್ನವೇ ಹೊನ್ನಾಳಿಯಲ್ಲಿ ಚಿನ್ನಾಭರಣ ಕಳವು ನಡೆದಿದೆ.
Read Also: ಕಳ್ಳತನ ಆರೋಪ; ಮರಕ್ಕೆ ಕಟ್ಟಿ ಗುಪ್ತಾಂಗಕ್ಕೆ ಇರುವೆ ಬಿಟ್ಟು ಚಿತ್ರಹಿಂಸೆ, ದಾವಣಗೆರೆಯಲ್ಲಿ ಅಮಾನವೀಯ ಘಟನೆ !
ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದ ಮನೆಯೊಂದರ ಬೀಗ ಮುರಿದು 2.30 ಲಕ್ಷ ರೂಪಾಯಿ ನಗದು ಸಹಿತ 15.35 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿದೆ.
ಹೊನ್ನಾಳಿ ನಿವಾಸಿ ಎಂ.ಎಸ್. ಸತೀಶ್ ಎಂಬುವವರ ಮನೆಯಲ್ಲಿ ಕಳವು ಪ್ರಕರಣ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮನೆಗೆ ನುಗ್ಗಿದ ಕಳ್ಳರು, ಬೀಗ ಮುರಿದು 208 ಗ್ರಾಂ ಬಂಗಾರ,396 ಗ್ರಾಂ ಬೆಳ್ಳಿ ಆಭರಣ, 2.30 ಲಕ್ಷ ನಗದು ಸೇರಿ ಒಟ್ಟು 15.35 ಲಕ್ಷ ಮೌಲ್ಯದ ಆಭರಣ ಕಳವು ಮಾಡಿದ್ದಾರೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a comment