Davanagere Today News | Kannada News | 12-02-2023
Davanagere: ಕಳೆದ ಹಲವು ದಿನಗಳ ಹಿಂದೆ ಅಡಕೆ ದರದಲ್ಲಿ ಹೆಚ್ಚು ಏರಿಳಿತ ಕಂಡಿದ್ದ ಅಡಕೆ ಬೆಳೆಗಾರರಲ್ಲಿ ಸದ್ಯ ನಿರಾಳತೆ ಮೂಡಿದೆ.
ಹೌದು, ಕಳೆದ 20 ದಿನದಿಂದ ಅಡಕೆ ದರದಲ್ಲಿ ( Arecanut Price) ಸ್ಥಿರತೆ ಕಾಯ್ದುಕೊಂಡು ಬಂದಿದ್ದು, ದಾವಣಗೆರೆ, ಚನ್ನಗಿರಿ, ಭೀಮಸಮುದ್ರ ಸೇರಿ ವಿವಿಧ ಭಾಗದ ಅಡಕೆ ಬೆಳೆಗಾರರಿಗೆ ಸಮಾಧಾನ ತಂದಿದೆ.
ದಿನದ ವಹಿವಾಟಿನ ಏರಿಳಿತ ನಡುವೆಯೇ ಜಿಲ್ಲೆಯಲ್ಲಿ ಫೆ. 11ರಂದು ಮಾರುಕಟ್ಟೆ ಬೆಲೆ ಪ್ರತಿ ಕ್ವಿಂಟಾಲ್ ಗೆ ಗರಿಷ್ಠ 46, 800ರೂ. ಗೆ ಮಾರಾಟವಾಗಿದೆ. ಇದರಿಂದ ಹಿಂದಿನ ದಿನದ ಮಾರುಕಟ್ಟೆಗೆ ಹೋಲಿಸಿದರೆ ಅಡಡಿ ಬೆಲೆಯಲ್ಲಿ ಯಾವುದೇ ಕುಸಿತ ಕಂಡಿಲ್ಲ.
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ಉತ್ತಮ ರಾಶಿ ಅಡಿಕೆ ಪ್ರತಿ ಕ್ವಿಂಟಾಲ್ ಗೆ ದರ 46, 800 ಗರಿಷ್ಠ ಬೆಲೆ ದಾಖಲಾಗಿದೆ.
ಚನ್ನಗಿರಿ ಅಡಕೆ ಧಾರಣೆ
- ಚನ್ನಗಿರಿ ರಾಶಿ 45, 099-46, 800
ಭೀಮಸಮುದ್ರ ( ಚಿತ್ರದುರ್ಗ) ಅಡಕೆ ಧಾರಣೆ
- ಆಪಿ 46,119-46,529
- ಬೆಟ್ಟೆ 35,129-35579
- ಕೆಂಪುಗೋಟು 30,100-30,500
- ರಾಶಿ 45639-46069
ಹೊನ್ನಾಳಿ ಅಡಕೆ ದರ
- ಹೊನ್ನಾಳಿ ರಾಶಿ 45699 45699

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ದಾವಣಗೆರೆಲೈವ್ gmail
» Whatsapp Number
95903247228