Davangere News Today | Kannada News
ದಾವಣಗೆರೆ ಲೈವ್: ನಗರದ ಚರಂಡಿಯೊAದರ ಚೇಂಬರ್ ಗೆ ಬಿದ್ದ ಆಕಳ ಕರು ಪ್ರಾಣ ಉಳಿಸಿಕೊಳ್ಳಲು ಇಡೀ ರಾತ್ರಿ ಆಕ್ರಂದನ ಅನುಭವಿಸಿದ್ದು, ಬೆಳಗ್ಗೆ ಕರುವಿನ ಸ್ಥಿತಿ ಕಂಡ ಸ್ಥಳೀಯಯರು ಮಮ್ಮಲ ಮರುಗಿದ್ದಾರೆ.
ಪಾಲಿಕೆ ಸಿಬ್ಬಂದಿ ಯಡವಟ್ಟಿಯಿಂದ ಮೂಖ ಪ್ರಾಣಿಯೊಂದು ಪ್ರಾಣ ರಕ್ಷಣೆಗೆ ಇಡೀ ರಾತ್ರಿ ಸಂಕಟ ಅನುಭವಿಸಿದೆ. ದಾವಣಗೆರೆ ದಕ್ಷಿಣದ ಹಾಸಬಾವಿ ಸರ್ಕಲ್ ನ ಉಪಹಾರ ದರ್ಶಿನಿ ಹೋಟೆಲ್ ಪಕ್ಕ ಕನ್ಸೂರೆನ್ಸ್ ರಸ್ತೆಯಲ್ಲಿ ಚಂಡರಿಯ ಚೇಂಬರ್ ಪ್ಲೇಟ್ ತೆಗೆದಿದ್ದು, ರಾತ್ರಿ ವೇಳೆ ಕರು ಗುಂಡಿಗೆ ಬಿದ್ದಿದೆ.
ಈ ರಸ್ತೆಯಲ್ಲಿ ಜಾನುವಾರುಗಳ ಸಂಖ್ಯೆ ಕೂಡ ಹೆಚ್ಚಿದ್ದು, ಪದೇಪದೇ ಚರಂಡಿ ಚೇಂಬರ್ ಬಾಯಿ ತೆರೆದಿರುತ್ತವೆ. ಇದರಿಂದ ಮೂಖ ಪ್ರಾಣಿಗಳ ಪ್ರಾಣಕ್ಕೆ ಕುತ್ತು ಎನ್ನುವಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆ ಸಿಬ್ಬಂದಿ ಮತ್ತು ಪೌರಕಾರ್ಮಿಕರ ನಿರ್ಲಕ್ಷö್ಯದಿಂದ ಈ ಘಟನೆ ಸಂಭವಿಸಿದೆ ಎಂದು ದೂರಿದ್ದಾರೆ.
ಶನಿವಾರ ರಾತ್ರಿ ಚೇಂಬರಲ್ಲಿ ಬಿದ್ದು ಆಕಳ ಕರು ಜೀವ ಉಳಿಸಿಕೊಳ್ಳುವುದಕ್ಕೆ ಕೂಗುವುದನ್ನ ಬೆಳಿಗ್ಗೆ ಜನರು ನೋಡಿದ್ದು, ಪಾಲಿಕೆಯ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್ಚರ ವಹಿಸಬೇಕಿದೆ ಎಂದು ನಾಗರಿಕರು ಮನವಿ ಮಾಡಿದ್ದಾರೆ.
ದಾವಣಗೆರೆ ಮಹಾನಗ ಪಾಲಿಕೆ ಸಿಬ್ಬಂದಿ ಎಚ್ಚೆತ್ತುಕೊಳ್ಳಿದಾವಣಗೆರೆ ಮಹಾನಗ ಪಾಲಿಕೆ ಸಿಬ್ಬಂದಿ ಎಚ್ಚೆತ್ತುಕೊಳ್ಳಿ ಈಗ ದನ ಕರುಗಳು ಬಿದ್ದಿವೆ ನಾಳೆ ಒಂದಲ್ಲ ಒಂದು ದಿನ ಮಕ್ಕಳು ಕೂಡ ಬೀಳಬಹುದು ಚೇಂಬರಿನ ಕೆಲಸ ಮುಗಿದ ಮೇಲೆ ಕೂಡಲೇ ಮುಚ್ಚುವ ಕೆಲಸವನ್ನು ಕೂಡಲೇ ಮಾಡಿ.ಹಾಗೆ ಬಿಟ್ಟು ಹೋಗುವುದರಿಂದ ಜೀವ ಹಾನಿ ಆಗಬಹುದು.ಮಲ್ಲಿಕಾರ್ಜುನ್ ಇಂಗಳೇಶ್ವರ, ಸಾಮಾಜಿಕ ಕಾರ್ಯಕರ್ತ
English Summary: Calf fell down in drainage davangere. Davangere Live, Davangere News.
Leave a comment