ದಾವಣಗೆರೆ.ಮೇ.25: ಹೆಚ್ಚು ಹಣದ ಆಸೆಗಾಗಿ ಆನ್ಲೈನ್ ವಂಚಕರ ಬಲೆಗೆ ಬೀಳುತ್ತಿರುವವರ ಸಂಖ್ಯೆ ಮತ್ತೆ ಹೆಚ್ಚಾಗಿದ್ದು, ಇನ್ ಸ್ಟಾಗ್ರಾಂನಲ್ಲಿ ಬಂದ ಲಿಂಕ್ ನಂಬಿ ಹಣ ಹೂಡಿಕೆ ಮಾಡಿದ್ದ ವ್ಯಾಪಾರಿಯೊಬ್ಬರು ಬರೋಬ್ಬರಿ 51 ಲಕ್ಷ ರೂ. ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಜಿಲ್ಲೆಯ ಹೊನ್ನಾಳಿ ತಾಲೂಕು ಹೊಸಹಳ್ಳಿಯ ಮಧುಕುಮಾರ್ ಎಂಬುವರಿಗೆ ಹಣ ಹೂಡಿಕೆ ಮೇಲೆ ಶೇ.200ರಷ್ಟು ಲಾಭ ಸಿಗಲಿದೆ ಎಂಬ ಲಿಂಕ್ ಇನ್ ಸ್ಟಾ ಗ್ರಾಂನಲ್ಲಿ ಬಂದಿತ್ತು. ಇದನ್ನೆ ನಂಬಿದ ಮಧುಕುಮಾರ್ ತಮ್ಮ ಹೆಸರು, ಪ್ಯಾನ್ ಕಾರ್ಡ್, ಫೋನ್ ನಂಬರ್ ನೀಡಿ ಹೊಸ ಐಡಿ ತೆರೆದಿದ್ದಾರೆ. ಕಳೆದ 2024ರ ಸೆಪ್ಟೆಂಬರ್ 22ರಿಂದ 2025 ಏಪ್ರಿಲ್ 26 ರವರೆಗೆ ಒಟ್ಟು 51,24,464 ರೂ. ಹಣವನ್ನು ಆನಲೈನ್ ಮೂಲಕ ಅಪರಿಚಿತ ಹೇಳಿದ ಲಿಂಕ್ಗೆ ವರ್ಗಾವಣೆ ಮಾಡಿದ್ದರು.
ಮೊದಲು 20 ಲಕ್ಷ ರೂ. ಹಾಕಿದಾಗ 9 ಲಕ್ಷ ರೂ. ಲಾಭಾಂಶ ತೋರಿಸುತ್ತಿತ್ತು. ಅದನ್ನು ಬಿಡಿಸಿಕೊಳ್ಳಲು ಮಧುಕುಮಾರ್ ಮುಂದಾದಾಗ, ಬೋನಸ್ ಇನ್ನೂ ಪೂರ್ಣಗೊಂಡಿಲ್ಲ. 50 ಲಕ್ಷ ರೂ. ಹೂಡಿಕೆ ಮಾಡಿದ ನಂತರ ಶೇ.200 ಲಾಭವನ್ನು ಯಾವುದೇ ಕಮಿಶನ್ ನೀಡದೇ ಬಿಡಿಸಿಕೊಳ್ಳಬಹುದು ಎಂದು ಸಂಪರ್ಕದಲ್ಲಿದ್ದ ಅಪರಿಚಿತರು ಚಾಟ್ ಮೂಲಕ ತಿಳಿಸಿದ್ದಾರೆ. ಇದನ್ನು ನಂಬಿದ ಮಧುಕುಮಾರ್ ಒಟ್ಟು 51 ಲಕ್ಷ ರೂ. ಹೂಡಿಕೆ ಮಾಡಿದ್ದರು. ಬೋನಸ್ ಸೇರಿ 1.05 ಕೋಟಿ ರೂ. ಲಾಭ ಆನಲೈನ್ ನಲ್ಲಿ ತೋರಿಸುತ್ತಿತ್ತು. ವಿತ್ ಡ್ರಾ ಒತ್ತಿದಾಗ ಈ ಹಣದಲ್ಲಿ ಜಿಎಸ್ಟಿ, ಟಿಸಿಎಸ್ ಸೇರಿದಂತೆ ಶೇ.40ರಷ್ಟು ಹಣ ಕಡಿತವಾಗುವುದರಿಂದ ವಿತ್ ತಿಳಿಸಿದ್ದಾರೆ. ಮಾಡದಂತೆ ಅಪರಿಚಿತರು
ಆದರೂ ಮಧುಕುಮಾರ್ ಹಣ ಬಿಡಿಸಿಕೊಳ್ಳಲು ಮುಂದಾದಾಗ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. 24 ಗಂಟೆ ನಂತರ ಅಕೌಂಟ್ ರೀ ಓಪನ್ ಆದಾಗ, ಬ್ಯಾಲೆನ್ಸ್ ಜೀರೋ ತೋರಿಸಿದೆ. ಚಾಟ್ ಬೋರ್ಡ್ಲ್ಲಿ ಸಂಪರ್ಕಿಸಿದಾಗ ಎಲ್ಲವನ್ನೂ ಡಿಲೀಟ್ ಮಾಡಿರುವುದು ಕಂಡುಬಂದಿದೆ. ಈ ಬಗ್ಗೆ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ದಾವಣಗೆರೆಲೈವ್ gmail
» Whatsapp Number
95903247228