SSLC Result 2025: SSLC ಫಲಿತಾಂಶ ಪ್ರಕಟ: ಈ ಬಾರಿ ಬೆಣ್ಣೆನಗರಿ ದಾವಣಗೆರೆಗೆ 21 ಸ್ಥಾನ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಇಂದು, ಮೇ 2, 2025 ರಂದು SSLC ಪರೀಕ್ಷಾ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದೆ. ಕಳೆದ ಮಾರ್ಚ್ 21 ರಿಂದ ಏಪ್ರಿಲ್ 4, 2025 ರವರೆಗೆ ರಾಜ್ಯಾದ್ಯಂತ 2,818 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಈ ಪರೀಕ್ಷೆಯಲ್ಲಿ ಸುಮಾರು 8.96 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ 4,61,563 ಬಾಲಕರು ಮತ್ತು 4,34,884 ಬಾಲಕಿಯರು ಪರೀಕ್ಷೆ ಬರೆದಿದ್ದರು.
ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು 75,000 ಕ್ಕೂ ಹೆcreensaver ಮೌಲ್ಯಮಾಪಕರು ಪೂರ್ಣಗೊಳಿಸಿದ್ದು, ಒಟ್ಟು 6 ವಿಷಯಗಳಿಗೆ ಸಂಬಂಧಿಸಿದ 60 ಲಕ್ಷಕ್ಕೂ ಅಧಿಕ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗಿದೆ. ಈ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿರುವ KSEEB ಇಂದು ಫಲಿತಾಂಶವನ್ನು ಬಿಡುಗಡೆ ಮಾಡಿದೆ.
ಬಾಲಕಿಯರೇ ಮಿಂಚಿದ್ದಾರೆ!
ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರು ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ಒಟ್ಟಾರೆ 66.14% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 74.00% ಬಾಲಕಿಯರು ಉತ್ತೀರ್ಣರಾಗಿದ್ದಾರೆ, ಆದರೆ ಬಾಲಕರ ಉತ್ತೀರ್ಣ ಶೇಕಡಾವಾರು 58.07 % ಆಗಿದೆ.
ಪ್ರಮುಖ ಅಂಕಿಅಂಶಗಳು
- ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು: 7,90,890
- ಉತ್ತೀರ್ಣರಾದವರು: 5,23,075
- ಒಟ್ಟಾರೆ ಉತ್ತೀರ್ಣ ಶೇಕಡಾವಾರು: 66.14%
ಫಲಿತಾಂಶ ಪರಿಶೀಲನೆ
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು KSEEB ಅಧಿಕೃತ ವೆಬ್ಸೈಟ್ಗಳಾದ karresults.nic.in ಅಥವಾ kseab.karnataka.gov.in ನಲ್ಲಿ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ಬಳಸಿಕೊಂಡು ಪರಿಶೀಲಿಸಬಹುದು. ಡಿಜಿಲಾಕರ್ ಮತ್ತು SMS ಮೂಲಕವೂ ಫಲಿತಾಂಶವನ್ನು ಪಡೆಯಬಹುದು.
ಮರುಮೌಲ್ಯಮಾಪನ ಮತ್ತು ಪೂರಕ ಪರೀಕ್ಷೆಗೆ ಸಂಬಂಧಿಸಿದ ವಿವರಗಳನ್ನು ಶೀಘ್ರದಲ್ಲೇ KSEEB ಘೋಷಿಸಲಿದೆ. ಇತ್ತೀಚಿನ ನವೀಕರಣಗಳಿಗಾಗಿ ಅಧಿಕೃತ ವೆಬ್ಸೈಟ್ಗಳನ್ನು ಭೇಟಿಯಾಗಿ.
ಬೆಣ್ಣೆನಗರಿ ದಾವಣಗೆರೆಗೆ 21 ಸ್ಥಾನ
- ದಕ್ಷಿಣ ಕನ್ನಡ- 91.12
- ಉಡುಪಿ-89.96
- ಉತ್ತರ ಕನ್ನಡ- 83.19
- ಶಿವಮೊಗ್ಗ- 82.29
- ಕೊಡಗು – 82.21
- ಹಾಸನ- 82.12
- ಶಿರಸಿ- 80.47
- ಚಿಕ್ಕಮಗಳೂರು- 77.9
- ಬೆಂಗಳೂರು ಗ್ರಾಮಾಂತರ- 74.02
- ಬೆಂಗಳೂರು ದಕ್ಷಿಣ- 72.3
- ಬೆಂಗಳೂರು ಉತ್ತರ – 72.27
- ಮಂಡ್ಯ- 13476
- ಹಾವೇರಿ- 69.03
- ಕೋಲಾರ- 68.47
- ಮೈಸೂರು- 68.39
- ಬಾಗಲಕೋಟೆ- 68.29
- ಗದಗ- 67.72
- ಧಾರವಾಡ- 67.62
- ವಿಜಯನಗರ- 67.62
- ತುಮಕೂರು- 67.03
- ದಾವಣಗೆರೆ- 66.09
- ಚಿಕ್ಕಬಳ್ಳಾಪುರ- 63.64
- ಚಿತ್ರದುರ್ಗ- 63.21
- ರಾಮನಗರ- 63.12
- ಬೆಳಗಾವಿ- 62.16
- ಚಿಕ್ಕೋಡಿ- 62.12
- ಚಾಮರಾಜನಗರ- 61.45
- ಮಧುಗಿರಿ- 60.65
- ಬಳ್ಳಾರಿ- 60.26
- ಕೊಪ್ಪಳ – 57.32
- ಬೀದರ್ – 53.25
- ರಾಯಚೂರು – 52.05
- ಯಾದಗಿರಿ – 51.6
- ವಿಜಯಪುರ – 49.58
- ಕಲಬುರಗಿ – 42.43

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ದಾವಣಗೆರೆಲೈವ್ gmail
» Whatsapp Number
95903247228