ದಾವಣಗೆರೆ: ನಗರದ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗದಲ್ಲಿ ಕುಖ್ಯಾತ ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಕಣುಮನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದ ಕಣುಮ, ಸೆಟಲ್ಮೆಂಟ್ ವಿಚಾರಗಳಲ್ಲಿ ಗುರುತಿಸಿಕೊಂಡಿದ್ದರು. ಆಟೋದಲ್ಲಿ ಬಂದ ನಾಲ್ಕೈದು ಜನರ ಗುಂಪು, ಮಚ್ಚು ಮತ್ತು ಇತರ ಮಾರಕಾಸ್ತ್ರಗಳಿಂದ ಕಣುಮಾ ಅವರನ್ನು ಕೊಚ್ಚಿ, ಮುಖಕ್ಕೆ ಪೇಪರ್ ಸ್ಪ್ರೇ ಹೊಡೆದು ಭೀಕರವಾಗಿ ಕೊಲೆಗೈದಿದ್ದಾರೆ.
ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಐಜಿಪಿ, ಎಸ್ಪಿ ಉಮಾ ಪ್ರಶಾಂತ್, ಶ್ವಾನದಳ ಸೇರಿದಂತೆ ಪೊಲೀಸ್ ತಂಡ ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.
ಮುಖಕ್ಕೆ ಪೇಪರ್ ಸ್ಪ್ರೇ ಹೊಡೆದು ಕೊಲೆ
ನಗರದ ಹದಡಿ ರಸ್ತೆಯ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎದುರಿನ ಕಲ್ಲೇಶ್ವರ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಪಕ್ಕದ ಜಿಮ್ ಸಮೀಪದ ಕ್ಲಬ್ಗೆ ಆಟೋದಲ್ಲಿ ಬಂದ ನಾಲ್ಕೈದು ಜನರ ಗುಂಪು ನುಗ್ಗಿದೆ. ಹಂತಕರು ಮೊದಲಿಗೆ ಕಣುಮ ಅವರ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದಿದ್ದಾರೆ. ಕೈ, ಕಾಲು ಮತ್ತು ದೇಹಕ್ಕಿಂತಲೂ ಹೆಚ್ಚಾಗಿ ತಲೆ ಹಾಗೂ ಕುತ್ತಿಗೆಗೆ ಮಚ್ಚು ಮತ್ತು ಇತರ ಆಯುಧಗಳಿಂದ ತೀವ್ರವಾಗಿ ಥಳಿಸಿ, ಮುಖಕ್ಕೆ ಪೇಪರ್ ಸ್ಪ್ರೇ ಹೊಡೆದು ಕೊಲೆಗೈದಿದ್ದಾರೆ. ರಕ್ತಸಿಕ್ತ ಸ್ಥಳದ ದೃಶ್ಯವು ಕೃತ್ಯದ ಭೀಕರತೆಯನ್ನು ಎತ್ತಿ ತೋರಿಸಿದೆ. ಕೊಲೆಗಾರರು ಘಟನೆಯ ಬಳಿಕ ಪರಾರಿಯಾಗಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ದಾವಣಗೆರೆಲೈವ್ gmail
» Whatsapp Number
95903247228