ದಾವಣಗೆರೆ, ಮೇ 06, 2025: ನಗರದ ಕೆ.ಎಸ್.ಆರ್.ಸಿ. ಬಸ್ ನಿಲ್ದಾಣದಲ್ಲಿ ಕಳೆದುಕೊಂಡಿದ್ದ ಸುಮಾರು 30 ಗ್ರಾಂ ಬಂಗಾರದ ಮಾಂಗಲ್ಯ ಸರ ಮತ್ತು ಒಂದು ಉಂಗುರವಿರುವ ಪರ್ಸ್‌ನ್ನು KTJ ನಗರ ಪೊಲೀಸ್ ತಂಡವು ಯಶಸ್ವಿಯಾಗಿ ಪತ್ತೆ ಹಚ್ಚಿ, ಹಿಂದಿರುಗಿಸಿದ್ದು, ವಾರಸುದಾರರ ನೆಮ್ಮದಿಗೆ ಕಾರಣವಾಗಿದೆ.
ಮೇ 01, 2025ರಂದು ಮಧ್ಯಾಹ್ನ, ಚನ್ನಗಿರಿ ತಾಲೂಕಿನ ತಣ್ಣಿಗೆರೆ ಗ್ರಾಮದ ಚೈತ್ರ ಎಂಬುವರು ಬಂಗಾರದ ಆಭರಣಗಳಿರುವ ಪರ್ಸ್ ಬಸ್ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಕಾಣೆಯಾಗಿದೆ ಎಂದು KTJ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್ ನಿರೀಕ್ಷಕ ಹೆಚ್.ಎಸ್. ಸುನೀಲ್ ಕುಮಾರ್ ನೇತೃತ್ವದ ತಂಡ, ಪಿಎಸ್‌ಐ ಲತಾ ಆರ್. ಮತ್ತು ಸಿಬ್ಬಂದಿ ಸಹಕಾರದೊಂದಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕಳೆದುಕೊಂಡ ಪರ್ಸ್‌ನ್ನು ಪತ್ತೆ ಮಾಡಿದೆ.
ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ವಿಜಯಕುಮಾರ ಎಂ. ಸಂತೋಷ ಮತ್ತು ನಗರ ಡಿವೈಎಸ್‌ಪಿ ಶ್ರೀ ಶರಣಬಸವೇಶ್ವರ ಬಿ. ಉಪಸ್ಥಿತಿಯಲ್ಲಿ ಪರ್ಸ್‌ನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಈ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಪೊಲೀಸ್ ನಿರೀಕ್ಷಕ ಶ್ಸುನೀಲ್ ಕುಮಾರ್, ಪಿಎಸ್‌ಐ ಆರ್.ಲತಾ , ಸಿಬ್ಬಂದಿ ಸುರೇಶ್ ಬಾಬು, ಮಹಮದ್ ರಫಿ, ಗಿರೀಶ್ ಗೌಡ, ಸಿದ್ದಪ್ಪ, ನಾಗರಾಜ್ ಡಿ.ಬಿ., ಮಾರುತಿ ಮತ್ತು ಸಂಪತ್ ನಾಯ್ಕರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀಮತಿ ಉಮಾಪ್ರಶಾಂತ್ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ವಿಜಯಕುಮಾರ ಎಂ. ಸಂತೋಷ ಮತ್ತು ಶ್ರೀ ಮಂಜುನಾಥ ಜಿ. ಪ್ರಶಂಸಿಸಿದ್ದಾರೆ. KTJ ನಗರ ಪೊಲೀಸರ ಈ ಕಾರ್ಯಕ್ಷಮತೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ದಾವಣಗೆರೆಲೈವ್ gmail
» Whatsapp Number
95903247228