ದಾವಣಗೆರೆ, ಮೇ 08, 2025: (ಗ್ರಾಮ ಪಂಚಾಯಿತಿ ಉಪಚುನಾವಣೆ) ದಾವಣಗೆರೆ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿಯಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.
ಗ್ರಾಮ ಪಂಚಾಯಿತಿ ಉಪಚುನಾವಣೆ ವೇಳಾಪಟ್ಟಿ
- ಮೇ 08: ಚುನಾವಣಾ ಅಧಿಸೂಚನೆ
- ಮೇ 14: ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
- ಮೇ 15: ನಾಮಪತ್ರ ಪರಿಶೀಲನೆ
- ಮೇ 17: ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ
- ಮೇ 25: ಮತದಾನ (ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ, ಅಗತ್ಯವಿದ್ದರೆ)
- ಮೇ 28: ಚುನಾವಣಾ ಪ್ರಕ್ರಿಯೆ ಮುಕ್ತಾಯ
ಹರಿಹರ ತಾಲ್ಲೂಕು:
ಕೊಂಡಜ್ಜಿ ಗ್ರಾಮ ಪಂಚಾಯಿತಿ:
- 8-ಗಂಗನರಸಿ: ಹಿಂದುಳಿದ ವರ್ಗ ‘ಅ’ ಸಾಮಾನ್ಯ ಮಹಿಳೆ (1 ಸ್ಥಾನ)
- 9-ಗಂಗನರಸಿ: ಅನುಸೂಚಿತ ಜಾತಿ ಮಹಿಳೆ (1 ಸ್ಥಾನ) ಮತ್ತು ಸಾಮಾನ್ಯ (1 ಸ್ಥಾನ)
- ಎಳೆಹೊಳೆ ಗ್ರಾಮ ಪಂಚಾಯಿತಿ, ಮಳಲಹಳ್ಳಿ: ಅನುಸೂಚಿತ ಪಂಗಡ (1 ಸ್ಥಾನ)
ಜಗಳೂರು ತಾಲ್ಲೂಕು:
- ಮುಸ್ಟೂರು ಗ್ರಾಮ ಪಂಚಾಯಿತಿ, ಮೂಡಲ ಮಾಚಿಕೆರೆ: ಸಾಮಾನ್ಯ (1 ಸ್ಥಾನ)
ಈ ಉಪಚುನಾವಣೆಯ ಮೂಲಕ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ದಾವಣಗೆರೆಲೈವ್ gmail
» Whatsapp Number
95903247228