ದಾವಣಗೆರೆ: 2025ನೇ ಸಾಲಿನಲ್ಲಿ ನಡೆಸಲಾದ ಜೆ.ಇ.ಇ ಮೇನ್ಸ್ ಪರೀಕ್ಷೆಯಲ್ಲಿ ಬ್ಯಾಚುಲರ್ ಆಫ್ ಪ್ಲಾನಿಂಗ್ ವಿಭಾಗದಲ್ಲಿ ನಗರದ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಯಶವಂತ ಡಿ.ಎಸ್ ರಾಷ್ಟ್ರ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಬ್ಯಾಚುಲರ್ ಆಫ್ ಪ್ಲಾನಿಂಗ್ ವಿಭಾಗದಲ್ಲಿ ಮಹಮ್ಮದ್ ಮುತಾಹರ್ 5ನೇ ರ‍್ಯಾಂಕ್, ಶ್ರೀನಿವಾಸ್ ಬಿ.ಜೆ 10ನೇ, ಸಾನಿಧ್ಯ ಎಂ 11ನೇ ರ‍್ಯಾಂಕ್ ಹಾಗೂ ವರುಣ್ ಕೆ.ವಿ 23ನೇ ರ‍್ಯಾಂಕ್ ಪಡೆದು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ
ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಬ್ಯಾಚುಲರ್ ಆಫ್ ಪ್ಲಾನಿಂಗ್ ಮತ್ತು ಬ್ಯಾಚುಲರ್ ಆಫ್ ಆರ್ಕಿಟೆಕ್ಟರ್ ವಿಭಾಗಗಳಲ್ಲಿ 50 ರ‍್ಯಾಂಕ್ ಒಳಗೆ 11 ರ‍್ಯಾಂಕ್. 500 ರ‍್ಯಾಂಕ್ ಒಳಗೆ 18 ರ‍್ಯಾಂಕ್, 1000 ರ‍್ಯಾಂಕ್ ಒಳಗೆ 23 ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದಾರೆ.
ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಂಗಮೇಶ್ವರ ಗೌಡರು, ನಿರ್ದೇಶಕ ಡಾ. ಜಿ.ಎನ್.ಎಚ್. ಕುಮಾರ್, ಪ್ರಾಚಾರ್ಯ ಡಾ. ಎಸ್. ಪ್ರಸಾದ್ ಬಂಗೇರ ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ದಾವಣಗೆರೆಲೈವ್ gmail
» Whatsapp Number
95903247228