Home ದಾವಣಗೆರೆ ದಾವಣಗೆರೆ: ₹369 ಲಕ್ಷ ವೆಚ್ಚದಲ್ಲಿ ಹಳೇ ಪಿ.ಬಿ. ರಸ್ತೆಗೆ ಶೃಂಗಾರ, ಇನ್ನು ಜಗಮಗ – ಅಲಂಕಾರಿಕ ದೀಪಗಳ ರಂಗು!
ದಾವಣಗೆರೆ

ದಾವಣಗೆರೆ: ₹369 ಲಕ್ಷ ವೆಚ್ಚದಲ್ಲಿ ಹಳೇ ಪಿ.ಬಿ. ರಸ್ತೆಗೆ ಶೃಂಗಾರ, ಇನ್ನು ಜಗಮಗ – ಅಲಂಕಾರಿಕ ದೀಪಗಳ ರಂಗು!

Share
ದಾವಣಗೆರೆ
Share

ದಾವಣಗೆರೆ: ಹಳೇ ಪಿ.ಬಿ.ರಸ್ತೆಯನ್ನು ಅಗಲೀಕರಣ ಮಾಡಿದ್ದಲ್ಲದೇ ಅದನ್ನು ಸಂಪೂರ್ಣವಾಗಿ ಅಭಿವೃದ್ಧಿಗೊಳಿಸಿ ಇಂದು ರಸ್ತೆಯ ಉದ್ದಕ್ಕೂ ಅಲಂಕಾರಿಕ ದೀಪಗಳನ್ನು ಅಳವಡಿಸಲು ಕಾರಣರಾದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್‌ ಅವರು ಲೋಕಾರ್ಪಣೆಗೊಳಿಸಿದರು.

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಬೀರೂರು-ಸಮ್ಮಸಗಿ ರಸ್ತೆಯಲ್ಲಿ ಬರುವ ಡಿ.ಸಿ.ಎಂ. ಟೌನ್‌ ಶಿಪ್ ನಿಂದ ಗಣಪತಿ ದೇವಸ್ಥಾನದವರೆಗೂ, ನಂದಿನಿ ಹಾಲಿನ ಡೈರಿಯಿಂದ ದೊಡ್ಡಬಾತಿ ಗ್ರಾಮದವರೆಗೆ ಮತ್ತು ನೀಲಾನಹಳ್ಳಿ ಕ್ರಾಸ್ ರಸ್ತೆಯಿಂದ ಅಮರಾವತಿ ರೈಲ್ವೆಗೇಟ್‌ವರೆಗೂ ರಸ್ತೆಯ ಮಧ್ಯದ ವಿಭಜಕದಲ್ಲಿ ಅಂದಾಜು 369 ಲಕ್ಷಗಳ ವೆಚ್ಚದಲ್ಲಿ ಅಳವಡಿಸಿರುವ ಅಲಂಕಾರಿಕ ಕೋನಿಕಲ್ ದೀಪಗಳನ್ನು ದಾವಣಗೆರೆ ಹಳೇ ಪಿ.ಬಿ.ರಸ್ತೆಯ ಆವರಗೆರೆ ಸರ್ಕಲ್‌ ಬಳಿ ಬೆಳಗಿಸುವ ಮೂಲಕ ಸಾರ್ವಜನಿಕರಿಗೆ ಅರ್ಪಿಸಿದರು.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಈ ಹಿಂದೆ ಹಳೇ ಪಿ.ಬಿ.ರಸ್ತೆಯನ್ನು ಅಗಲೀಕರಣ ಮಾಡುವಾಗ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಬೆಂಬಲಿಸಿ ನಮ್ಮ ಕಾರ್ಯವನ್ನು ಪ್ರಶಂಶಿಸಿ ಅಭಿವೃದ್ಧಿಗೆ ಕೈಜೋಡಿಸಿದ್ದರ ಫಲವಾಗಿ ಇಂದು ದಾವಣಗೆರೆ ಗಡಿಯಿಂದ ಹರಿಹರ ಗಡಿಯವರೆಗೂ ಉತ್ತಮ ರಸ್ತೆ ಮತ್ತು ಅಲಂಕಾರಿಕ ದೀಪಗಳನ್ನು ಅಳವಡಿಸುವ ಕೆಲಸ ಆಯಿತು ಎಂದರು.

ಹಳೇ ಪಿ.ಬಿ.ರಸ್ತೆ ಅಗಲೀಕರಣ ಮತ್ತು ನಂತರ ಅಭಿವೃದ್ಧಿಗೆ ಸಹಕರಿಸಿದವರನ್ನು ಸ್ಮರಿಸಿದ ಸಚಿವರು ಇದನ್ನು ಸಹಿಸಿದ ವಿರೋಧಪಕ್ಷಗಳು ಸುಖಾಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದು, ಇದಕ್ಕೆ ಯಾರು ಸೊಪ್ಪು ಹಾಕದೇ ನಮಗೆ ಬೆಂಬಲ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಅಧ್ಯಕ್ಷ ದಿನೇಶ್‌ ಕೆ.ಶೆಟ್ಟಿ ವಹಿಸಿದ್ದರು.

ಶಾಸಕ ಸಮರ್ಥ್‌ ಶಾಮನೂರು ಮಲ್ಲಿಕಾರ್ಜುನ್‌, ಗಂಗಾಧರಸ್ವಾಮಿ, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ರೇಣುಕಾ, ಸದಸ್ಯರಾದ ವಾಣಿ ಬಕ್ಕೇಶ್‌, ಮಾಜಿ ಅಧ್ಯಕ್ಷ ಅಯೂಬ್‌ ಪೈಲ್ವಾನ್‌, ಮಾಜಿ ಮೇಯರ್‌ ಜಯಮ್ಮ ಗೋಪಿನಾಯ್ಕ, ಆವರಗೆರೆ ಗ್ರಾಮದ ಕಾಂಗ್ರೆಸ್‌ ಪಕ್ಷದ ಮುಖಂಡರು, ಗ್ರಾಮಸ್ಥರು, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ಪರಮೇಶ್ವರ ನಾಯ್ಕ ಮತ್ತಿತರರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles

ದಾವಣಗೆರೆಯಲ್ಲಿ ಬೆಂಕಿ ಕೆನ್ನಾಲಗೆಗೆ ಭಸ್ಮವಾಯ್ತು ಕನಸಿನ ಮನೆ: ಸಮಯಪ್ರಜ್ಞೆಯಿಂದ ಪಾರಾದ ಏಳು ಮಂದಿ!

ದಾವಣಗೆರೆ: ಅದು ಬೆಳ್ಳಂಬೆಳಿಗ್ಗೆಯ ಸಮಯ. ಮನೆಯವರೆಲ್ಲರೂ ನಿದ್ರೆ ಮಂಪರಿನಲ್ಲಿದ್ದರು. ಆದರೆ ಇದ್ದಕ್ಕಿದ್ದಂತೆ ಶಬ್ಧವೊಂದು ಜೋರಾಗಿ ಕೇಳಿ...

ದಾವಣಗೆರೆ: ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ

ದಾವಣಗೆರೆ: ಪ್ರಸಕ್ತ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗಾಗಿ ಆನ್‍ಲೈನ್...

ದಾವಣಗೆರೆ: ವಿಶ್ವಕರ್ಮ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ – ಕೊನೆಯ ದಿನಾಂಕ ಸೆಪ್ಟೆಂಬರ್ 30

ದಾವಣಗೆರೆ: ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮ ನಿಯಮಿತ ವತಿಯಿಂದ ಪ್ರಸಕ್ತ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ...

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ: ವಿವಿಧ ಯೋಜನೆಯಗಳಿಗೆ ಸಾಲ ಸೌಲಭ್ಯ

ದಾವಣಗೆರೆ: ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ನಿಯಮಿತ ವತಿಯಿಂದ ಪ್ರಸಕ್ತ ಸಾಲಿನಲ್ಲಿ...