Harihara: ಹರಿಹರದ ಶ್ರೀಕ್ಷೇತ್ರ ರಾಜನಹಳ್ಳಿ ಗುರುಪೀಠ ವಾಲ್ಮೀಕಿ ಜಾತ್ರೆ 2023ರ ಸಂಭ್ರಮಕ್ಕೆ ಸರ್ವ ಸಿದ್ಧಗೊಂಡಿದೆ. ಫೆ.8 ಹಾಗೂ 9ರಂದು ವಾಲ್ಮೀಕಿ ಜಾತ್ರೆ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದ್ದು, ಹಲವು ವಿಶೇಷ ಕಾರ್ಯಕ್ರಮಗಳು ಜರುಗಲಿವೆ.
ವಾಲ್ಮೀಕಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ವಾಲ್ಮೀಕಿ ಜಾತ್ರೆ ನಡೆಸಲಾಗುತ್ತಿದ್ದು, ಸಾಂಸ್ಕೃತಿಕ ಸಂಭ್ರಮದ ಪ್ರಮುಖ ವೇದಿಕೆಯಾಗಿದೆ.
ಫೆ.8ರ ಬೆಳಗ್ಗೆ 7ಕ್ಕೆ ರಾಜನಹಳ್ಳಿಯಿಂದ ಶ್ರೀ ಮಠದವರೆಗೆ ವಾಲ್ಮೀಕಿ ಮಹರ್ಷಿ ಅವರ ಭಾವಚಿತ್ರ ಮೆರವಣಿಗೆ ಮತ್ತು ವಾಲ್ಮೀಕಿ ಧ್ವಜಾರೋಹಣ ನೆರವೇರಿದ್ದು,, ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಲಂಕೇಶ್ ಅಧ್ಯಕ್ಷತೆ ವಹಿಸುವರು. 5ನೇ ವರ್ಷz ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಿತು. ನಂತರ 8.30ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ನಡೆಯಿತು..
Read Also: ರಾಜನಹಳ್ಳಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆಗೆ ಸಕಲ ಸಿದ್ಧತೆ: ಫೆ.೯ರಂದು ಆಗಮಿಸಲಿದ್ದಾರೆ ಸಿಎಂ ಬೊಮ್ಮಾಯಿ
ವಾಲ್ಮೀಕಿ ಜಾತ್ರೆಗೆ ಊಟದ ವ್ಯವಸ್ಥೆ
ವಾಲ್ಮೀಕಿ ಜಾತ್ರೆಯ ಭದ್ರತೆಗೆ ಡಿವೈಎಸ್‌ಪಿ 4, ಸಿಪಿಐ 12, ಪಿಎಸ್‌ಐ 36, ಗೃಹ ರಕ್ಷಕ ಸಿಬ್ಬಂದಿ 200 ಮಂದಿ, ಎಎಸ್‌ಐ 46, ಪೇದೆಗಳು 363, ಭದ್ರತೆಗೆ ನಿಯೋಜಿಸಲಾಗಿದೆ. ವೇದಿಕೆ, ಸಭಾಂಗಣದಲ್ಲಿ 30,000 ಚೇರ್‌ಗಳ ವ್ಯವಸ್ಥೆ, ಸುಮಾರು 40 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆ ವ್ಯವಸ್ಥೆ, ಭದ್ರತೆ ದೃಷ್ಟಿಯಿಂದ 40ಸಿಸಿ ಕ್ಯಾಮೆರಾಗಳ ಅಳವಡಿಸಲಾಗಿದೆ.
ಊಟದ ವ್ಯವಸ್ಥೆಗಾಗಿ 100 ಕೌಂಟರ್ ಹಾಗೂ 450 ಮಂದಿ ಅಡುಗೆ ಭಟ್ಟರು ವ್ಯವಸ್ಥೆ ಮಾಡಿದ್ದು, ಹೆಸರುಬೇಳೆ ಮತ್ತು ಗೋದಿ ಪಾಯಸ, ಅನ್ನ, ಸಾಂಬಾರ್, ಬೆಳಗಿನ ಉಪಹಾರಕ್ಕೆ ಟೊಮ್ಯಾಟೋ ಬಾತ್, ಪಲಾವ್ ಹಾಗೂ ಇತರೆ ಆಹಾರ ಪದಾರ್ಥಗಳು ಭರ್ಜರಿ ಭೋಜನಕ್ಕೆ ಸಿದ್ಧವಾಗಿವೆ.
English Summary: Rajanahalli, Valmiki Jatre 2023, Valmiki Jatre, Harihara, Davangere News, Davangere Live, Davangere Information.
Leave a comment