Wednesday

26-03-2025 Vol 19

ಸ್ವ ಪಕ್ಷದವರೇ ಶಾಮನೂರಿಗೆ ಶತ್ರುನಾ…ಈ ಸಮಯ ಬಳಸಿಕೊಳ್ಳುತ್ತಾ ಕೈ ಪಡೆ?

Davangere News Today | Kannada News

ದಾವಣಗೆರೆ: ಘಟ್ಟದ ಮೇಲೆ, ಘಟ್ಟದ ಕೆಳಗಿನವರು ಎಂದು ಅನೇಕರು ಹೇಳುವುದು ಕಾಮನ್…ಇನ್ನೂ ಮಧ್ಯ ಕರ್ನಾಟಕದಲ್ಲಿ ಹೊಸ ದಾವಣಗೆರೆ, ಹಳೆ ದಾವಣಗೆರೆ ಎಂದು ಎರಡು ಭಾಗಗಳನ್ನಾಗಿ ಮಾಡಲಾಗಿದ್ದು, ಹಳೆ ದಾವಣಗೆರೆಯಲ್ಲಿ ಈಗ ರಾಜಕೀಯ ಹವಾ ಜೋರಾಗಿದೆ.

ಹೇಳಿ…ಕೇಳಿ…ಇದು…ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕ್ಷೇತ್ರ…ತುಸು ರಾಜಕೀಯ ಜೋರಾಗಿಯೇ ಇರುತ್ತದೆ..ಮೊಗ್ಗಿನ ಮುಳ್ಳು ಪಕ್ಕದಲ್ಲಿಯೇ ಎಂಬಂತೆ.

ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪಗೆ ಸ್ವ ಪಕ್ಷದವರೇ ಅವರ ವಿರುದ್ದ ದಕ್ಷಿಣದಲ್ಲಿ ಕಾಂಗ್ರೆಸ್ ಗೆ ಟಿಕೆಟ್ ಕೊಡಿ ಎಂದು ಹೈಕಮಾಂಡ್ ಗೆ ಅರ್ಜಿ ಸಲ್ಲಿಸಿದ್ದಾರೆ…

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಶಾಸಕರಲ್ಲದೇ ಮತ್ತೂ ಐವರು ಆಕಾಂಕ್ಷಿಗಳು ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಸಾದಿಕ್‌ ಪೈಲ್ವಾನ್‌, ಬಿ.ವೀರಣ್ಣ ದಕ್ಷಿಣ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದಾರೆ..ಬಿ.ವೀರಣ್ಣಗೆ ಸಿದ್ದರಾಮಯ್ಯ ಕೃಪಾಕಟಾಕ್ಷವಿದ್ದರೆ, ಸಾದಿಕ್ ಪೈಲ್ವಾನ್ ಗೆ ಎಂಎಲ್ಸಿ ಅಬ್ದುಲ್ ಜಬ್ಬಾರ್ ಬೆಂಬಲವಿದೆ…ಇನ್ನು ಇಬ್ರಾಹಿಂ ಕಲೀವುಲ್ಲಾ, ಸಾದಿಕ್‌ ಪೈಲ್ವಾನ್‌, ಸೈಯದ್‌ ಖಾಲಿದ್‌ ಅಹ್ಮದ್‌, ಮಹಮ್ಮದ್‌ ಇಕ್ಬಾಲ್‌ ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದಾರೆ.‌

ಚುನಾವಣೆಯಲ್ಲಿ ಸ್ಪರ್ಧೆ ಮಾಡುವವರು ಮೊದಲು ಟಿಕೇಟ್​ಗೆ ಅರ್ಜಿ ಸಲ್ಲಿಸಬೇಕು. ಹೀಗೊಂದು ನಿಯಮವನ್ನು ಕೆಪಿಸಿಸಿ ಮಾಡಿದೆ. ಇದು ಹತ್ತಾರು ಕುತೂಹಲಕ್ಕೆ ಕಾರಣವಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರ ಅಂದರೆ ಶಾಮನೂರು ಶಿವಶಂಕರಪ್ಪ, ಶಾಮನೂರು ಶಿವಶಂಕರಪ್ಪ ಅಂದರೆ ದಕ್ಷಿಣ ಕ್ಷೇತ್ರ ಎನ್ನುವಂತಿತ್ತು. ಅವರಿಗೆ ಸ್ವ ಪಕ್ಷದಲ್ಲಿ ಪ್ರತಿಸ್ಪರ್ಧಿಗಳೇ ಇಲ್ಲಾ ಎನ್ನವಂತಹ ಪರಿಸ್ಥಿತಿ ಇತ್ತು. ಆದರೆ ಈ ವರ್ಷ ಮಾತ್ರ ಶಾಮನೂರಿಗೆ ಅವರದ್ದೇ ಪಕ್ಷದಲ್ಲಿ ಟಿಕೇಟ್ ಆಕಾಂಕ್ಷಿಗಳು ಹುಟ್ಟಿಕೊಂಡಿರುವುದು ಶಾಮನೂರು ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಶಾಮನೂರು ಕುಟುಂಬದ ವಿರುದ್ಧ ಸಭೆ

ಇತ್ತೀಚೆಗೆ ಕಕ್ಕರಗೊಳ್ಳ ರಸ್ತೆಯಲ್ಲಿ ಶಾಮನೂರು ಕುಟುಂಬದ ವಿರುದ್ಧ ಕೆಲ ಕಾಂಗ್ರೆಸ್ ಮುಖಂಡರು ಸಭೆ ಮಾಡಿ ಅಚ್ಚರಿ ಮೂಡಿಸಿದ್ದರು. ಈ ಹಿಂದಿನ ಚುನಾವಣೆಯಲ್ಲಿ ಇರುವ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ.ಇಲ್ಲಿ ಏನೇ ಆದರೂ ಶಾಮನೂರು ಶಿವಶಂಕರಪ್ಪರಿಗೆ ಟಿಕೆಟ್ ಕಾಯಂ.

ಕಮಲ‌ ಪಾಳಯದಲ್ಲೂ ಪೈಪೋಟಿ

ಇನ್ನು ಬಿಜೆಪಿಯಲ್ಲಿಯೂ ತೀವ್ರ ಪೈಪೋಟಿ ಇದೆ. ನಾಲ್ಕು ಬಾರಿ ಸ್ಪರ್ಧಿಸಿದ್ದ ಯಶವಂತರಾವ್‌ ಜಾಧವ್‌ ಮತ್ತೆ ಅಖಾಡ ಸಿದ್ಧಪಡಿಸಿಕೊಳ್ಳುತ್ತಿದ್ದರೆ, ಮಾಜಿ ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ಅವರ ಫ್ಲೆಕ್ಸ್‌, ಬ್ಯಾನರ್‌ಗಳು ಎಲ್ಲೆಡೆ ರಾರಾಜಿಸತೊಡಗಿವೆ.

ಶ್ರೀನಿವಾಸ್‌ ದಾಸಕರಿಯಪ್ಪ ಇಲ್ಲಿ ಮತ್ತೊಬ್ಬ ಆಕಾಂಕ್ಷಿ. ಆದರೆ ರಾಜನಹಳ್ಳಿ ಶಿವಕುಮಾರ್ ಕೂಡ ತೆರೆಮರೆಯಲ್ಲಿ ಆಟವಾಡುತ್ತಿದ್ದಾರೆ. ಎಪಿಎಂಸಿ ಮಾಜಿ ಅಧ್ಯಕ್ಷ ಕೋಳೆನಹಳ್ಳಿ ಸತೀಶ್‌ ಹಿಂದೆ ಕೆಜೆಪಿಯಿಂದ ಸ್ಪರ್ಧಿಸಿದ್ದರು. ಈಗ ಬಿಜೆಪಿಯಿಂದ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಬಿ ಫಾರ್ಮ್‌ ಯಾರಿಗೆ ಸಿಗಲಿದೆ ಎಂಬುದು ಇನ್ನೂ ನಿಗೂಢವಾಗಿದೆ.

ನಮ್ಮ ಕುಟುಂಬದಿಂದ ಹೆಣ್ಣುಮಕ್ಕಳು ಸ್ಪರ್ಧಿಸಲ್ಲ: ಶಾಮನೂರು

ಶಾಮನೂರು ಶಿವಶಂಕರಪ್ಪ ಅವರಿಗೆ 92 ವರ್ಷ ವಯಸ್ಸಾಗಿದ್ದು, ದೇಹಕ್ಕೆ ಮಾತ್ರವಾಗಿದೆ..ಆದರೆ ಚಿರಯುವಕನಂತೆ ಓಡಾಡುತ್ತಾರೆ…ಯಾವುದೇ ಕಾರಣಕ್ಕೂಹುಮ್ಮಸ್ಸು ಕಡಿಮೆಯಾಗಿಲ್ಲ. ಅವರು ಸ್ಪರ್ಧಿಸದೇ ತಮ್ಮ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸುತ್ತಾರೆ ಎಂಬ ವದಂತಿ ಹಿಂದೊಮ್ಮೆ ಹರಡಿತ್ತು.

ಅವರ ಸೊಸೆ ಪ್ರಭಾ ಮಲ್ಲಿಕಾರ್ಜುನ ಅವರು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ‘ನಾನೇ ಸ್ಪರ್ಧಿಸುತ್ತೇನೆ. ನಮ್ಮ ಕುಟುಂಬದಿಂದ ಹೆಣ್ಣುಮಕ್ಕಳು ಸ್ಪರ್ಧಿಸಲ್ಲ’ ಎಂದು ಈ ವದಂತಿಗೆ ಶಾಮನೂರು ಶಿವಶಂಕರಪ್ಪ ಎಂಬಿಎ ಕಾಲೇಜು ಮೈದಾನದಲ್ಲಿ ತೆರೆ ಎಳೆದಿದ್ದರು.

ಟಿಕೆಟ್ ಸಿಗುವ ಬಗ್ಗೆ ಅನುಮಾನ

ಸದ್ಯ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 2,04, 442 ಮತಗಳಿವೆ. 1,01, 874 ಪುರುಷರು, 1, 02,533 ಹೆಣ್ಣು ಮಕ್ಕಳು ಇದ್ದಾರೆ‌ 212 ಮತಗಟ್ಟೆಗಳಿವೆ

ಕ್ಷೇತ್ರ ಪುನರ್‌ವಿಂಗಡಣೆಯಿಂದ ದಾವಣಗೆರೆ ವಿಧಾನಸಭಾ ಕ್ಷೇತ್ರ 2008ರಲ್ಲಿ ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ ಎಂಬ ಎರಡು ಕ್ಷೇತ್ರಗಳಾಗಿ ವಿಭಜನೆಗೊಂಡವು. ದಾವಣಗೆರೆ ದಕ್ಷಿಣ ಕ್ಷೇತ್ರ ಆದಾಗಿನಿಂದ ಶಾಮನೂರು ಶಿವಶಂಕರಪ್ಪ ಅವರೇ ಟಿಕೆಟ್‌ ಪಡೆದುಕೊಳ್ಳುತ್ತಾ ಬಂದಿದ್ದಾರೆ. 2008, 2013, 2018 ರ ಮೂರು ಚುನಾವಣೆಗಳಲ್ಲಿ ಅವರೇ ಜಯಶಾಲಿಯಾಗಿದ್ದಾರೆ. ಆದರೆ, ಈ ಬಾರಿ ಹಲವು ಕಾರಣಗಳಿಂದಾಗಿ ಅವರಿಗೇ ಟಿಕೆಟ್‌ ಸಿಗುತ್ತದೆ ಎಂಬ ಬಗ್ಗೆ ಖಾತ್ರಿ ಇಲ್ಲ ಎಂದು ಅನುಮಾನ ವ್ಯಕ್ತಪಡಿಸುತ್ತಾರೆ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 2008ರಲ್ಲಿ 10 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, 2013ರಲ್ಲಿ ಈ ಸಂಖ್ಯೆ 15ಕ್ಕೆ ಏರಿತು. ಅಲ್ಲದೇ, ಈ ಎರಡೂ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಡೆದ ಶೇಕಡವಾರು ಮತಗಳ ಪ್ರಮಾಣವೂ ಏರಿಕೆಯಾಗಿದೆ.

ಕ್ಷೇತ್ರ ಪುನರ್‌ ವಿಂಗಡಣೆಯಾದಾಗ ದಾವಣಗೆರೆ ವಿಧಾನಸಭಾ ಕ್ಷೇತ್ರ ದಕ್ಷಿಣ, ಉತ್ತರ ಎಂದು ಎರಡು ಕ್ಷೇತ್ರಗಳಾಗಿ ಮಾರ್ಪಟ್ಟವು. ಇದಕ್ಕೂ ಮೊದಲು ದಾವಣಗೆರೆ ವಿಧಾನಸಭಾ ಕ್ಷೇತ್ರದಲ್ಲಿ 1952ರಿಂದ 2004ರವರೆಗೆ ಒಟ್ಟು 13 ಚುನಾವಣೆಗಳು ನಡೆದಿವೆ.

ಇದರಲ್ಲಿ 9 ಬಾರಿ ಕಾಂಗ್ರೆಸ್, ಸಿಪಿಐ 3 ಸಲ ಹಾಗೂ ಪ್ರಜಾ ಸೋಷಲಿಸ್ಟ್‌ ಪಕ್ಷ (ಪಿಎಸ್‌ಪಿ) 1 ಬಾರಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿವೆ.

ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ ಕೋಟೆ

2008 ರಲ್ಲಿ ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್‌) 41,675 ಮತಗಳನ್ನು ಪಡೆದು ಶೇ. 41.50 ರಷ್ಟು ಮತ ಪಡೆದಿದ್ದರು. ಯಶವಂತರಾವ್‌ ಜಾಧವ್ (ಬಿಜೆಪಿ) 35,317 ಮತಗಳನ್ಬು ಪಡೆದಿದ್ದರು. 2013 ರಲ್ಲಿ ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್‌) 66,320 ಮತಗಳನ್ನು ಪಡೆದು ಶೇ. 55.05 ರಷ್ಟು ಮತ ಪಡೆದಿದ್ದರು. ಸೈಯದ್‌ ಸೈಫುಲ್ಲಾ (ಜೆಡಿಎಸ್‌) 26,162 ಮತ ಪಡೆದಿದ್ದರು. ಬಿ.ಲೋಕೇಶ್ (ಬಿಜೆಪಿ) 21,247 ಮತಗಳನ್ನು ಪಡೆದಿದ್ದರು. ಬಿ.ಎಂ.ಸತೀಶ್ (ಕೆಜೆಪಿ) 3,200 ಮತಗಳನ್ಬು ಪಡೆದಿದ್ದರು‌

ದಕ್ಷಿಣ ಕ್ಷೇತ್ರದಿಂದ ಎಂದಿನಂತೆ ಜೆ. ಅಮಾನುಲ್ಲಾ ಖಾನ್‌ ಜೆಡಿಎಸ್‌ನಿಂದ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್‌ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಆ ಪೈಕಿ ಅಮಾನುಲ್ಲಾ ಖಾನ್‌ ಕೂಡ ಒಬ್ಬರು.ಅಲ್ಲದೇ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್), ಆಮ್‌ ಆದ್ಮಿ ಪಾರ್ಟಿ (ಎಎಪಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಪ್ರಜಾಕೀಯ, ಎಸ್‌ಡಿಪಿಐ ಮತ್ತಿತರ ಪಕ್ಷಗಳು ತಮ್ಮ ಅಭ್ಯರ್ಥಿ ಕಣಕ್ಕಿಳಿಸಲು ತಯಾರಿ ನಡೆಸುತ್ತಿವೆ. ಚುನಾವಣೆ ಘೋಷಣೆಯಾಗುವ ಹೊತ್ತಿಗೆ ಸಿಪಿಐ, ಸಿಪಿಎಂನಿಂದಲೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಾಧ್ಯತೆ ಇರುವುದರಿಂದ ಈ ‘ಪ್ರತಿಷ್ಠಿತ’ ಕ್ಷೇತ್ರದಲ್ಲಿ ಸ್ಪರ್ಧಿಗಳ ಸಂಖ್ಯೆ ಸಹಜವಾಗಿಯೇ ಅಧಿಕವಾಗುವ ಸಾಧ್ಯತೆ ಇದೆ.

ಒಟ್ಟಾರೆ ಊರಿಗೆ ನಾನೊಬ್ಬನೇ ರಾಜಾ ಎನ್ನುವಂತಿದ್ದ ಶಾಮನೂರು ಶಿವಶಂಕರಪ್ಪ ಎದುರು ಟಿಕಟ್​ಗೆ ಅರ್ಜಿ ಸಲ್ಲಿಸಲು ಅಲ್ಪ ಸಂಖ್ಯಾತರು ಮುಂದಾಗಿದ್ದಾರೆ. ಇನ್ನೊಂದು ಕಡೆ ಶಾಮನೂರು ಕುಟುಂಬದ ವಿರುದ್ಧ ಜಿಲ್ಲೆಯ ಕೆಲ ಕಾಂಗ್ರೆಸ್ ಮುಖಂಡರೇ ಕೆಂಡ ಕಾರುತ್ತಿದ್ದಾರೆ. ಇದರ ಲಾಭ ಪಡೆದುಕೊಳ್ಳಲು ಕೇಸರಿ ಪಡೆ ಪ್ಲಾನಿಂಗ್ ಮಾಡುತ್ತಲೇ ಇದೆ.

English summary: shamanur shivashankarappa congress ticket fight. Davangere News Today | Kannada News. Davangere congress. Assembly Election.

Davanagere Live

Leave a Reply

Your email address will not be published. Required fields are marked *