ಚನ್ನಗಿರಿ: ಚನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿರುವ ಮರಾಠ ದೊರೆ ಷಹಜಿ ಮಹಾರಾಜರ ಸಮಾಧಿ ಸ್ಥಳದ ಅಭಿವೃದ್ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಚೆಗೆ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ೫ ಕೋಟಿ ರೂಪಾಯಿ ಹಣ ಮೀಸಲಿರಿಸಿದ್ದರು. ಈಗ ಅದಕ್ಕೆ ಕೆಲ ಸಂಘಟನೆಗಳಿAದ ವಿರೋಧ ವ್ಯಕ್ತವಾಗಿದ್ದು, ಅನುದಾನ ವಾಪಸ್ ಪಡೆಯುವಂತೆ ಆಗ್ರಹ ವ್ಯಕ್ತವಾಗಿದೆ.
ಬಜೆಟ್ ನಲ್ಲಿ ಷಹಾಜಿ ಸಮಾಧಿ ಅಭಿವೃದ್ಧಿಗೆ ನೀಡಿರುವ ೫ ಕೋಟಿ ಹಣ ಮರಳಿ ಪಡೆದು ಕೆಳದಿಯ ವೀರ ರಾಣಿ ಚೆನ್ನಮ್ಮ ಕಟ್ಟಿಸಿದ ಚನ್ನಗಿರಿ ಕೋಟೆ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿ ಇಂದು @kanase_KNS ದಾವಣಗೆರೆ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟಿಸಿ ಮನವಿ ಸಲ್ಲಿಸಿದರು.#ChangiriFort #Keladi #Davangeri pic.twitter.com/JnVempZ7xQ
— Bhimashankar Patil 🇮🇳 ಭೀಮಾಶಂಕರ ಪಾಟೀಲ್ (@bhimashankarptl) February 20, 2023
ಕರ್ನಾಟಕ ನವನಿರ್ಮಾಣ ಸೇನೆ ಚಿತ್ರದುರ್ಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದು, ರಾಜ್ಯ ಬಜೆಟ್ ನಲ್ಲಿ ಷಹಾಜಿ ಸಮಾಧಿ ಅಭಿವೃದ್ಧಿಗೆ ನೀಡಿರುವ ೫ ಕೋಟಿ ಹಣ ಮರಳಿ ಪಡೆದು ವೈರಿಪಡೆಗಳಿಂದ ಚಿತ್ರದುರ್ಗದ ಕೋಟೆಯನ್ನು ರಕ್ಷಣೆ ಮಾಡಿದ ವೀರ ವನಿತೆ ಒನಕೆ ಓಬವ್ವಳ ಸಮಾಧಿ ಸ್ಥಳ ಅಭಿವೃದ್ಧಿಪಡಿಸಲು ನೀಡುವಂತೆ ಆಗ್ರಹಿಸಿದರು.
ರಾಜ್ಯ ಸರ್ಕಾರ ಕನ್ನಡ ನಾಡಿನ ರಕ್ಷಣೆಗೆ ಹೋರಾಟ ನಡೆಸಿದ ಮಹನೀಯರ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕು. ಅದರಿಂದ ಮರಾಠ ದೊರೆ ಷಹಾಜಿ ಮಹರಾಜರ ಸಮಾಧಿ ಸ್ಥಳದ ಪ್ರಗತಿಗೆ ಮೀಸಲಿಟ್ಟ ಹಣವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ದಾವಣಗೆರೆ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಕೆಳದಿಯ ವೀರ ರಾಣಿ ಚೆನ್ನಮ್ಮ ಕಟ್ಟಿಸಿದ ಚನ್ನಗಿರಿ ಕೋಟೆ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿ ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಬಜೆಟ್ ನಲ್ಲಿ ಷಹಾಜಿ ಸಮಾಧಿ ಅಭಿವೃದ್ಧಿಗೆ ನೀಡಿರುವ ೫ ಕೋಟಿ ಹಣ ಮರಳಿ ಪಡೆದು ವೈರಿಪಡೆಗಳಿಂದ ಚಿತ್ರದುರ್ಗದ ಕೋಟೆಯನ್ನು ರಕ್ಷಣೆ ಮಾಡಿದ ವೀರ ವನಿತೆ ಒನಕೆ ಓಬವ್ವಳ ಸಮಾಧಿ ಸ್ಥಳ ಅಭಿವೃದ್ಧಿಪಡಿಸಲು ನೀಡುವಂತೆ ಆಗ್ರಹಿಸಿ ಇಂದು @kanase_KNS ಚಿತ್ರದುರ್ಗ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟಿಸಿ ಮನವಿ ಸಲ್ಲಿಸಿದರು.#ಒನಕೆ_ಓಬವ್ವ pic.twitter.com/rCN0ptJjoo
— Bhimashankar Patil 🇮🇳 ಭೀಮಾಶಂಕರ ಪಾಟೀಲ್ (@bhimashankarptl) February 20, 2023
Leave a comment