Wednesday

26-03-2025 Vol 19

ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಟಿಕೆಟ್ ಫೈಟ್; ಸವಿತಾಬಾಯಿಗೆ ಟಿಕೆಟ್ ನೀಡುವಂತೆ ಆತ್ಮಹತ್ಯೆಗೆ ಯತ್ನ

 

ದಾವಣಗೆರೆ : ಜಿಲ್ಲೆಯಲ್ಲಿ ಹಾಟ್‌ಸ್ಪಾಟ್ ಎಂದೇ ಖ್ಯಾತ ನಾಮ ಪಡೆದಿರುವ ಮಾಯಕೊಂಡದಲ್ಲಿ ಈಗ ಕಾಂಗ್ರೆಸ್ ಟಿಕೆಟ್‌ಗಾಗಿ ನೇರ ಸ್ಪರ್ಧೆ ನಡೆಯುತ್ತಿದ್ದುಘಿ, ಮೊದಲ ಭಾಗವಾಗಿ ಕೈ ಟಿಕೆಟ್ ಆಕಾಂಕ್ಷಿ ಸವಿತಾಬಾಯಿ ಬೆಂಬಲಿಗರು ದಾವಣಗೆರೆ ನಿವಾಸ ಹಾಗೂ ಮಾಯಕೊಂಡದ ಹೆಡ್ ಕ್ವಾರ್ಟರ್‌ನಲ್ಲಿ ಸವಿತಾಬಾಯಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದೆ. ಅಲ್ಲದೇ ಅವರ ಬೆಂಬಲಿಗರು ಆತ್ಮಹತ್ಯೆ ಯತ್ನಕ್ಕೂ ಕೈ ಹಾಕಿದ್ದರು.

ಈ ಕ್ಷೇತ್ರದಲ್ಲಿ ಕಳೆದಬಾರಿ ಚುನಾವಣೆಯಲ್ಲಿ ಶಾಸಕ ಲಿಂಗಣ್ಣ ಎದುರು ಕಡಿಮೆ ಮತಗಳಿಂದ ಸೋತಿದ್ದ ಬಸವಂತಪ್ಪ ಹಾಗೂ ಚಲನಚಿತ್ರ ನಟಿ ಸವಿತಾಬಾಯಿ ನಡುವೆ ನೇರಸ್ಪರ್ಧೆ ಇದ್ದು, ರಾಜ್ಯ, ರಾಷ್ಟ್ರ ನಾಯಕರನ್ನು ಟಿಕೆಟ್‌ಗಾಗಿ ಸಂಪರ್ಕ ಮಾಡುತ್ತಿದ್ದಾರೆ. ಈ ನಡುವೆ ಕ್ಷೇತ್ರದಲ್ಲಿ ಬಸವಂತಪ್ಪಗೆ ಟಿಕೆಟ್ ಎಂದು ಗಾಳಿ ಮಾತು ನಂಬಿದೆ. ಇದನ್ನೇ ನಂಬಿದ ಸವಿತಾಬಾಯಿ ಬೆಂಬಲಿಗರು ಮನೆ ಮುಂದೆ ಹಾಗೂ ಮಾಯಕೊಂಡದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಆತ್ಮಹತ್ಯೆ ಯತ್ನಗೂ ಪ್ರಯತ್ನಿಸಿದ್ದಾರೆ.

ಮಾಯಕೊಂಡದಲ್ಲಿ ಈಹಿಂದೆ ನಾಗಮ್ಮ ಕೇಶವಮೂರ್ತಿ ಬಿಟ್ಟರೇ, ಸವಿತಾಬಾಯಿ ಚುನಾವಣೆಗೆ ಸ್ಪರ್ಧಿಸಿದ್ದುಘಿ, ಎದುರಾಳಿ ಇನ್ನಿಲ್ಲದ ಕಸರತ್ತು ಮಾಡಿ ಟಿಕೆಟ್ ತಪ್ಪಿಸುತ್ತಿದ್ದಾರೆ. ಸವಿತಾಬಾಯಿ ಶಾಸಕಿ ಆಗದೇ ಹೋದ್ರೂ ಸಾಕಷ್ಟು ಸಹಾಯ ಮಾಡಿದ್ದಾರೆ. ಕಷ್ಟ ಎಂದಾಗ ಕೈ ಹಿಡಿದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಟಿಕೆಟ್ ಕೊಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.

savita bai mallesh naik

ಸವಿತಾಬಾಯಿಗೆ ಕಾಂಗ್ರೆಸ್ ಟಿಕೆಟ್ ನೀಡದೇ ಹೋದರೆ ಕಾಂಗ್ರೆಸ್‌ಗೆ ಮತ ಹಾಕೋದಿಲ್ಲ. ಸವಿತಾಬಾಯಿಯವರನ್ನು ಪಕ್ಷೇತರರನ್ನಾಗಿ ನಿಲ್ಲಿಸಿ ಗೆಲ್ಲಿಸುತ್ತೇವೆ..ಅವರಿಗೆ ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಬೇಕು. ಇಲ್ಲದೇ ಹೋದರೆ ಕಾಂಗ್ರೆಸ್ ಸೋಲಿಸಬೇಕಾಗುತ್ತದೆ ಎಂದು ಸವಿತಾಬಾಯಿ ಅಭಿಮಾನಿಗಳು ಹೈಕಮಾಂಡ್‌ಗೆ ಸಂದೇಶ ನೀಡಿದರು. ಇದಾದ ಬಳಿಕ ಸವಿತಾಬಾಯಿ ಬೆಂಬಲಿಗರು ಶಾಸಕ ಶಾಮನೂರು ನಿವಾಸದ ಎದುರು ಪ್ರತಿಭಟನೆ ನಡೆಸಿದರು. ಅಲ್ಲದೇ ಟಿಕೆಟ್‌ನೀಡುವಂತೆ ಮನವಿ ಮಾಡಿದರು.

ಕೈ ಟಿಕೆಟ್ ಆಕಾಂಕ್ಷಿ ಸವಿತಾಬಾಯಿ ಮಾತನಾಡಿ, ರಾತ್ರೋರಾತ್ರಿ ಸವಿತಾಬಾಯಿ ಮನೆಮುಂದೆ ಮಾಯಕೊಂಡದಿAದ ಬಂದಿದ್ದುಘಿ, ಕೆಲ ಕಾಲ ಗೊಂದಲ ವಾತಾವರಣ ಉಂಟಾಗಿತ್ತುಘಿ. ಇನ್ನು ಟಿಕೆಟ್ ?ನಲ್ ಮಾಡಿಲ್ಲಘಿ. ನನಗೆ ಶಾಮನೂರು ಶಿವಶಂಕರಪ್ಪಘಿ, ಎಸ್.ಎಸ್.ಮಲ್ಲಿಕಾರ್ಜುನ್ ಮೇಲೆ ನಂಬಿಕೆ ಇದೆ. ಅವರು ನನಗೆ ಟಿಕೆಟ್ ಕೊಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಾರು ಕೂಡ ದುಡುಕಬಾರದು. ನಾನು ಗೆದ್ದರೂ, ಸೋತರು ನಿಮ್ಮ ಜಯೆ ಇರುತ್ತೇನೆ ಎಂದು ಅಭಿಮಾನಿಗಳ ಮನವೊಲಿಸಲು ಪ್ರಯತ್ನ ಪಟ್ಟರೂ ಆಗಲಿಲ್ಲಘಿ. ಅಂತಿಮವಾಗಿ ಟಿಕೆಟ್ ಘೋಷಣೆಯಾದ ಬಳಿಕ ಮತ್ತೆ ನಿಮ್ಮೊಂದಿಗೆ ಬಂದು ಚರ್ಚೆ ಮಾಡುತ್ತೇನೆ…ಅಲ್ಲಿಯ ತನಕ ಸಮಾಧಾನವಾಗಿ ಇರೀ ಎಂದು ಅಭಿಮಾನಿಗಳಿಗೆ ಹೇಳಿದರು. ಸವಿತಾಬಾಯಿ ಮಾತನ್ನು ನಂಬಿದ ಅಭಿಮಾನಿಗಳು ಹಿಂದಿರುಗಿದರು.

 

Davanagere Live

Leave a Reply

Your email address will not be published. Required fields are marked *