ದಾವಣಗೆರೆ : ಶಿವಮೊಗ್ಗದ ಕುಖ್ಯಾತ ರೌಡಿ ಹಂದಿ ಅಣ್ಣಿ ಆಲಿಯಾಸ್ ಅಣ್ಣಪ್ಪ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲೆ ಅಣ್ಣಿ ಸಹಚರರು ನ್ಯಾಮತಿ ತಾಲೂಕಿನ ಗೋವಿನ ಕೋವಿ ಗ್ರಾಮದ ಬಳಿ ಅಟ್ಯಾಕ್ ನಡೆದಿದೆ.
ಹಂದಿ ಅಣ್ಣಿಯನ್ನು ಒಟ್ಟು 8 ಜನರು ಸೇರಿ ಕೊಲೆ ಮಾಡಿದ್ದು, ಇದರಲ್ಲಿ ಇಬ್ಬರು ಸಹಚರರಾದ ಮಧು ಹಾಗೂ ಆಂಜನೇಯ ಷರತ್ತುಬದ್ಧ ಜಾಮೀನು ಮೇಲೆ ಹೊರಬಂದಿದ್ದರು. ಬಳಿಕ ವಿಜಯಪುರ ಜೈಲಿನಿಂದ ಬಿಡುಗಡೆಯಾಗಿದ್ದರು. ಇದೇ ಅವಕಾಶವನ್ನು ಬಳಸಿಕೊಂಡ ಹಂದಿ ಅಣ್ಣಿ ಸಹಚರರು ಅವರನ್ನು ಹತ್ಯೆ ಮಾಡಲು ಸಂಚು ರೂಪಿಸುತ್ತಿದ್ದರು. ಅಂತೇಯೇ ಆರೋಪಿಗಳಾದ ಮಧು ಮತ್ತು ಆಂಜನೇಯನನ್ನು ನ್ಯಾಮತಿ ತಾಲೂಕಿನ ಗೋವಿನ ಕೋವಿ ಗ್ರಾಮದ ಬಳಿ ಹಲ್ಲೆ ಮಾಡಲಾಗಿದೆ. ಸ್ಥಳಕ್ಕೆ ದಾವಣಗೆರೆ ಎಸ್ಪಿ ಸಿ.ಬಿ.ರಿಷ್ಯಂತ್ ಹಾಗೂ ಹೊನ್ನಾಳಿ ಪೊಲೀಸರ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಈ ಹಿಂದೆ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆ ಸನಿಹವೇ ರೌಡಿಶೀಟರ್ ಹಂದಿ ಅಣ್ಣಿಯನ್ನು ಕಾಡಾ ಕಾರ್ತಿ ಟೀಂ ಎಂಬ ತಂಡ ಬರ್ಭರವಾಗಿ ಕೊಲೆ ಮಾಡಿ ಪರಾರಿಯಾಗಿತ್ತು. ಕೊಲೆ ಮಾಡಿ ಜೈಲು ಸೇರಿದ್ದ ಎಂಟು ಮಂದಿಯ ಪೈಕಿ, ಇಬ್ಬರಿಗೆ ಜಾಮೀನು ಸಿಕ್ಕಿತ್ತು. ಇದೀಗ ಅವರಿಬ್ಬರ ಮೇಲೆ ಹಲ್ಲೆಯಾಗಿದೆ. ಪರಿಣಾಮ ಓರ್ವ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಇದೆ. ಸ್ಥಳಕ್ಕೆ ಎಸ್ಪಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸ್ಥಳದಲ್ಲಿಯೇ ಸ್ಕ್ರಾಪಿಯೋ ವಾಹನವನ್ನು ಸ್ಥಳದಲ್ಲಿನ ಗುಂಡಿಯಲ್ಲಿ ಬಿಟ್ಟಿದ್ದಾರೆ.
ಕುಖ್ಯಾತ ಪಾತಕಿ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ಶಿವಮೊಗ್ಗದ ಲಕ್ಷ್ಮೀ ಟಾಕೀಸ್‌ನಿಂದ ಪೊಲೀಸ್ ಚೌಕಿ ಬಳಿ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಹಂದಿ ಅಣ್ಣಿಯನ್ನು ಇನ್ನೋವಾ ಕಾರ್‌ನಲ್ಲಿ ಹಿಂಬಾಲಿಸಿ ಬಂದ ಎಂಟು ಮಂದಿ ದುಷ್ಕರ್ಮಿಗಳು ಅಟ್ಯಾಕ್ ನಡೆಸಿದ್ದರು. ಈ ವೇಳೆ ಹಂದಿ ಅಣ್ಣಿ ಬೈಕ್ ಬಿಟ್ಟು ಓಡಲು ಆರಂಭಿಸಿದರೂ, ಮಚ್ಚು ಲಾಂಗು ಹಿಡಿದ ದುಷ್ಕರ್ಮಿಗಳು ಜನರ ಮಧ್ಯೆಯೇ ಅಟ್ಟಾಡಿಸಿ ಹಂದಿ ಅಣ್ಣಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ದಾಳಿಯೂ ಅದೇ ರೀತಿ ನಡೆದಿದ್ದುಘಿ,ಸ್ಕ್ರಾಪಿಯೋ ವಾಹನದಲ್ಲಿ ಬಂದವರು ಅಟ್ಯಾಕ್ ಮಾಡಿದ್ದಾರೆ.
ಪೊಲೀಸ್ ಠಾಣೆ ಸಮೀಪ ಹಂದಿ ಅಣ್ಣಿ ಮರ್ಡರ್
ಇನ್ನೇನು ನೂರು ಮೀಟರ್ ದೂರದಲ್ಲಿ ಪೊಲೀಸ್ ಠಾಣೆ ಇದೆ ಎನ್ನುವಷ್ಟರಲ್ಲಿ ಹಂದಿ ಅಣ್ಣಿ ಮೇಲೆ ಅಟ್ಯಾಕ್ ನಡೆದಿತ್ತುಘಿ. ಹಂದಿ ಅಣ್ಣಿ ನೆಲಕ್ಕೆ ಬೀಳುತ್ತಿದ್ದಂತೆ ದುಷ್ಕರ್ಮಿಗಳು ತಲೆಯ ಮೇಲೆ ಲಾಂಗು ಮತ್ತು ಮಚ್ಚುಗಳಿಂದ ಹಲ್ಲೆ ನಡೆಸಿ ಕಾರಿನಲ್ಲಿ ಪರಾರಿಯಾಗಿದ್ದರು.
ಹಂದಿ ಅಣ್ಣಿ ಇತಿಹಾಸ
ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ಇನ್ನು ಮೀಸೆ ಚಿಗುರೊಡೆಯುವ ವೇಳೆ ಅಂದಿನ ಕುಖ್ಯಾತ ರೌಡಿಗಳಾಗಿದ್ದ ಲವ ಹಾಗೂ ಕುಶ ಎಂಬ ಅವಳಿ ಸಹೋದರರನ್ನು ಬರ್ಬರವಾಗಿ ಹತ್ಯೆ ಮಾಡಿ ಪಾತಕ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ. ಅಂದಿನಿಂದ ಶಿವಮೊಗ್ಗದಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡಿದ್ದ ಹಂದಿ ಅಣ್ಣಿ ಬಳಿಕ ಕುಖ್ಯಾತ ಪಾತಕಿ ಹೆಬ್ಬೆಟ್ಟು ಮಂಜನ ಶಿಷ್ಯನಾಗಿ ಬೆಳೆದ. ಇಲ್ಲಿಂದ ಹಂದಿ ಅಣ್ಣಿ ನಾನಾ ಕೊಲೆ ಕೇಸುಗಳಲ್ಲಿ ಭಾಗಿಯಾಗಿದ್ದಘಿ. ಈತನ ಮೇಲೆ ಮೂರ್ನಾಲ್ಕು ಮರ್ಡರ್ ಕೇಸ್‌ಗಳಿದ್ದುಘಿ, ಜೈಲಿಗೆ ಹೋಗಿದ್ದು ಕೆಲವೇ ದಿನಗಳು.
ನವುಲೆ ಮೋಹನ ಕೊಲೆ ಕೇಸಿನ ಪ್ರಮುಖ ಆರೋಪಿ
ಹಂದಿ ಅಣ್ಣಿ ಶಿವಮೊಗ್ಗದ ನವುಲೆ ಮೋಹನ ಕೊಲೆ ಕೇಸಿನ ಪ್ರಮುಖ ಆರೋಪಿಯಾಗಿದ್ದಘಿ. 2018ರಲ್ಲಿ ನಡೆದ ಕೊರಂಗು ಕೃಷ್ಣನ ಬಲಗೈ ಬಂಟ ಬಂಕ್ ಬಾಲು ಮರ್ಡರ್ ಕೇಸ್ ನಲ್ಲೂ ಹಂದಿ ಅಣ್ಣಿಯ ಹೆಸರು ಕೇಳಿ ಬಂದಿತ್ತು. ಇನ್ನು ರಾಬರಿ ಮಾಡುವುದು, ಧಮ್ಕಿ ಹಾಕುವುದು ಈತನ ಉದ್ಯೋಗವಾಗಿತ್ತುಘಿ. ಈ ಸಂಬಂಧ ಶಿವಮೊಗ್ಗದ ವಿವಿಧ ಠಾಣೆಗಳಲ್ಲಿ ದೂರುಗಳು ದಾಖಲಾಗಿದ್ದವು.
ಹೆಬ್ಬೆಟ್ಟು ಮಂಜನ ಸಹಚರ
ಹಂದಿ ಅಣ್ಣಿ ಹೆಬ್ಬೆಟ್ಟು ಮಂಜನ ಸಹಚರನಾಗಿದ್ದರಿಂದ ಈತನ ರಾಜ್ಯ ದೇಶ ಬಿಟ್ಟು ವಿದೇಶದವರೆಗೂ ವ್ಯಾಪಿಸಿ ತ್ತು.ಘಿಅಕ್ರಮ ಮರಳು ಗಣಿಗಾರಿಕೆ, ಅಕ್ರಮ ಕಲ್ಲುಗಣಿಗಾರಿಕೆ, ರಿಯಲ್ ಎಸ್ಟೇಟ್ನಲ್ಲಿಯೂ ಈತ ಸಕ್ರಿಯನಾಗಿದ್ದ. ಕುಖ್ಯಾತ ಪಾತಕಿ ಹೆಬ್ಬೆಟ್ಟು ಮಂಜ ವಿದೇಶದಲ್ಲಿ ಕುಳಿತು ಹಂದಿ ಅಣ್ಣಿಯ ಮೂಲಕವೇ ಈ ಎಲ್ಲ ವ್ಯವಹಾರವನ್ನು ನಡೆಸುತ್ತಿದ್ದ ಎಂಬುದು ಹಳೆ ಮಾತು.
ಸ್ಕೇಚ್
ಲವ ಕುಶ ಕೊಲೆಯಾದಾಗಿನಿಂದ ಆತನ ಸಹಚರರು ಹಂದಿ ಅಣ್ಣಿಯ ಮೇಲೆ ಕಿಡಿಕಾರುತ್ತಲೇ ಇದ್ದರು. ಇನ್ನು ನವುಲೆ ಮೋಹನನ ಕೊಲೆ ಬಳಿಕ ಆತನ ಸಹಚರರೂ ಹಂದಿ ಅಣ್ಣಿ ಮೇಲೆ ರಿವೇಂಜ್ ತೀರಿಸಿಕೊಳ್ಳಲು ಕಾಯುತ್ತಿದ್ದರು. ಇದರ ಮಧ್ಯೆ ಶಿವಮೊಗ್ಗದಕ್ಕೆ ಆಗಮಿಸಿದ್ದ ಬಂಕ್ ಬಾಲು ಕೊಲೆಯಾದಾಗ ಇದಕ್ಕೆ ಕುಮ್ಮಕ್ಕು ನೀಡಿದ್ದು ಇದೇ ಹಂದಿ ಅಣ್ಣಿ ಎಂಬ ಕಾರಣಕ್ಕೆ ಕೊರಂಗು ಕೃಷ್ಣನ ಟೀಂ ಸಹ ಈತನ ಬಲಿ ಪಡೆಯಲು ಕಾಯುತ್ತಲೇ ಇತ್ತು. ಇದರ ಮಧ್ಯೆ ಶಿವಮೊಗ್ಗದ ಅನುಪಿನ ಕಟ್ಟೆ ಸಮೀಪ 2020ರಲ್ಲಿ ಹಂದಿ ಅಣ್ಣಿಯ ತಮ್ಮ ಗಿರೀಶ್ ತೂರಬಿಲ್ಲೆ ಆಟ ಆಡುವಾಗ ಅಜರ್ ಅಲಿಯಾಸ್ ಅಜ್ರು ಎಂಬಾತನೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಇದರಿಂದ ಕೆರಳಿದ ಅಜ್ರು ಗಿರೀಶನನ್ನು ಹಿಂಬಾಲಿಸಿಕೊಂಡು ಬಂದು ಗೋಪಾಳದ ಸಿದ್ದೇಶ್ವರ ಸರ್ಕಲ್ ನಲ್ಲಿ ಕೊಲೆ ಮಾಡಿದ್ದ. ಆಗ ಹಂದಿ ಅಣ್ಣಿ ತನ್ನ ತಮ್ಮನನ್ನು ಕೊಲೆ ಮಾಡಿದವರನ್ನು ಉಳಿಸುವುದಿಲ್ಲ ಎಂದು ಶಪಥ ಮಾಡಿದ್ದ. ಇದರಿಂದ ಹೆದರಿದ ಅರ್ಜ ಹಾಗೂ ಗ್ಯಾಂಗ್ ನಾವು ಹಂದಿ ಅಣ್ಣಿಯನ್ನು ಕೊಲೆ ಮಾಡದೇ ಇದ್ದರೆ ನಾವು ಬದುಕಲು ಸಾಧ್ಯವಿಲ್ಲ ಎಂದು ಇವರೂ ಹಂದಿ ಅಣ್ಣಿಗೆ ಸ್ಕೆಚ್ ಹಾಕಿದ್ದರು. ಈಗ ಹಂದಿಅಣ್ಣಿ ಇಲ್ಲವಾದರೂ ಆತನ ಸಹಚರರು ಅವನ ಾಲೋವರ್ಸ್ ಮೇಲೆ ಅಟ್ಯಾಕ್ ನಡೆದಿದೆ.