ದಾವಣಗೆರೆ ಲೈವ್, ಹೊನ್ನಾಳಿ: ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ಶಾಸಕ ರೇಣುಕಾಚಾರ್ಯ ಅವರ ಅಭಿಮಾನಿಗಳು ಹಾಗೂ ಮುಖಂಡರು ಭರ್ಜರಿ ರಸ ಮಂಜರಿ ಕಾರ್ಯಕ್ರಮ ಆಯೋಜಿಸಿದ್ದು, ಸ್ವತಃ ಎಂ.ಪಿ.ರೇಣುಕಾಚಾರ್ಯ ಸಖತ್ ಸ್ಟೆಪ್ ಹಾಕಿದ್ದು, ಅಭಿಮಾನಿಗಳು ಹಾಗೂ ಗ್ರಾಮಸ್ಥರು ಫಿದಾ ಆಗಿದ್ದಾರೆ.
ಯಾವುದೇ ರಸ ಮಂಜರಿ ಕಾರ್ಯಕ್ರಮವಿರಲಿ ಅದರಲ್ಲಿ ಶಾಸಕ ರೇಣುಕಾಚಾರ್ಯ ಅವರ ಡ್ಯಾನ್ಸ್ ಗಮನ ಸೆಳೆಯುವುದು ಕಾಮನ್. ಈ ಬಾರಿ ತಮ್ಮ ಜನ್ಮದಿನದ ಕಾರ್ಯಕ್ರಮದಲ್ಲಿ ಭರ್ಜರಿ ನೃತ್ಯ ಮಾಡಿ ಅಭಿಮಾನಿಗಳು ಹಾಗೂ ಗ್ರಾಮಸ್ಥರನ್ನು ರಂಜಿಸಿದ್ದಾರೆ.
ಟಗರು ಬಂತು ಟಗರ್ ಸಾಂಗ್ ಗೆ ಶಾಸಕ ರೇಣುಕಾಚಾರ್ಯ ಥೇಟ್ ಸಿನಿಮಾ ನಟರಂತೆ ಹೆಜ್ಜೆ ಹಾಕಿದ್ದು, ಇದಕ್ಕೆ ವೇದಿಕೆ ಮೇಲಿದ್ದ ಕೆಲ ಮುಖಂಡರು ಸಾಥ್ ನೀಡಿದ್ದಾರೆ. ವಿಧಾನಸಭೆ ಚುನಾವಣೆ ಹತ್ತಿರದ ಹಿನ್ನೆಲೆಯಲ್ಲಿ ಶಾಸಕ ರೇಣುಕಾಚಾರ್ಯ ಅವರ ಅಭಿಮಾನಿಗಳು ದೊಡ್ಡ ಕಾರ್ಯಕ್ರಮ ಆಯೋಜಿಸಿದ್ದು, ರಾಜಕೀಯ ಎದುರಾಳಿಗಳಿಗೆ ಸಂದೇಶ ರವಾನಿಸಿದ್ದಾರೆ.