Davangere News Today | Kannada News
ದಾವಣಗೆರೆ: ಬೆಣ್ಣೆ ನಗರಿ ಎಂದು ಖ್ಯಾತ ನಾಮ ಪಡೆದಿರುವ ದಾವಣಗೆರೆ ಬೆಣ್ಣೆ ದೋಸೆಗೆ ಫೇಮಸ್ ಹಾಗೆಯೇ ಅಕ್ರಮಪಡಿತರ ಅಕ್ಕಿ ಮಾರಾಟಕ್ಕೂ ಒಂದಿಷ್ಟು ಹೆಸರು ಮಾಡಿದೆ…
ಸರಕಾರ ಬಡವರಿಗೋಸ್ಕರ ಪಡಿತರ ಅಕ್ಕಿಯನ್ನು ನೀಡಿದರೆ…ಕೆಲವರು ಆ ಅಕ್ಕಿಯನ್ನು ಮನೆ ಮುಂದೆ ಬಂದ ಆಟೋಗಳಿಗೆ, ದೋಸೆ ಅಂಗಡಿಗಳಿಗೆ ನೀಡುತ್ತಿದ್ದಾರೆ.…ಬೆಣ್ಣೆ ದೋಸೆ ಹೋಟೆಲ್ ಗಳು ಸಹ ಪಡಿತರ ಅಕ್ಕಿಯನ್ನು ಬಳಸಿಕೊಂಡು ದುಬಾರಿ ದರಕ್ಕೆ ಬೆಣ್ಣೆ ದೋಸೆ ಮಾರಾಟ ಮಾಡುತ್ತಿವೆ.
ಈಗಾಗಲೇ ದಾವಣಗೆರೆ ಬೆಣ್ಣೆ ದೋಸೆ ಇಡೀ ರಾಜ್ಯದಲ್ಲಿ ಫೇಮಸ್ ಆಗಿದ್ದು, ಅದರ ಹಿಂದೆ ಅದರದ್ದೇ ಆದ ಮುಖಾಡವಿದೆ.
ಈಗಾಗಲೇ ದಾವಣಗೆರೆಯಲ್ಲಿ ಗಲ್ಲಿಗೊಂದು ದೋಸೆ ಅಂಗಡಿಗಳಿದೆ..ಒಂದು ಬೆಣ್ಣೆ ದೋಸೆಗೆ ನಲವತ್ತು ರೂಪಾಯಿಗೆ ಮಾರಾಟ ಮಾಡುತ್ತಾರೆ ಜನರು ಸಹ ದುಬಾರಿ ಹಣ ಕೊಟ್ಟು ನಾಲಿಗೆಯಲ್ಲಿ ಬೆಣ್ಣೆ ದೋಸೆಯನ್ನು ಚಪ್ಪರಿಸುತ್ತಿದ್ದಾರೆ…ಹಾಗಾದ್ರೆ ಬೆಣ್ಣೆ ದೋಸೆಗೂ, ಅಕ್ರಮ ಪಡಿತರ ಅಕ್ಕಿಗೂ ಮಾರಾಟವಿರಬಹುದಾ ಎಂಬ ಪ್ರಶ್ನೆ ಹುಟ್ಟುಬಹುದು..ನಿಜವಾಗಿಯೂ ಈ ಎರಡರ ನಡುವೆಯೂ ಸಾಮ್ಯತೆ ಇದೆ.
ಸಾಮಾನ್ಯವಾಗಿ ಬೆಣ್ಣೆ ದೋಸೆ ಹೋಟೆಲ್ ಗಳು ದುಬಾರಿ ಅಕ್ಕಿ ಬಳಸಿ ದೋಸೆ ಮಾಡುವುದಿಲ್ಲ. ಅದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹಾಗಾದ್ರೆ ಕಡಿಮೆ ದರಕ್ಕೆ ಅಕ್ಕಿ ಎಲ್ಲಿ ಸಿಗುತ್ತದೆ ಎಂಬ ಪ್ರಶ್ನೆ ಉದ್ಬವಿಸಿದಾಗ ಹುಟ್ಟುವುದು ಅನುಮಾನ.
ಪಡಿತರ ಅಕ್ಕಿ ಬೆಣ್ಣೆ ದೋಸೆ ಹೊಟೇಲ್ ಗೆ
ದಾವಣಗೆರೆ ಸ್ಲಂ ಹಾಗೂ ಹಳ್ಳಿಗಳಲ್ಲಿ ಪಡಿತರ ಅಕ್ಕಿಯನ್ನು ಯಾರು ಊಟ ಮಾಡುತ್ತಿಲ್ಲ. ಬದಲಾಗಿ ಮಾರಾಟ ಮಾಡುತ್ತಿದ್ದಾರೆ.ಸರಕಾರ ಅಕ್ಕಿ ಕೊಟ್ಟ ಬಳಿಕ ಮಾರನೇ ದಿನವೇ ಆಟೋದಲ್ಲಿ ಸರಕಾರದ ಅಕ್ಕಿ ಕೊಳ್ಳೋದಕ್ಕೆ ಮನೆ ಮುಂದೆ ಬರುತ್ತಾರೆ…ಒಂದು ಮನೆಗೆ ಕನಿಷ್ಠ ಹತ್ತು ಕೆಜಿ ಅಕ್ಕಿಯನ್ನು 12 ರೂಪಾಯಿಗೆ ಮಾರಾಟ ಮಾಡುತ್ತಾರೆ ಅಂದ್ರೆ ಒಂದು ಮನೆಗೆ ಹತ್ತು ಕೆಜಿ ಅಕ್ಕಿ ಕೊಳ್ಳುವ ದಂಧೆ ಕೋರ ಒಂದು ಊರಿನಲ್ಲಿ ಕನಿಷ್ಠ ಕ್ವೀಂಟಾಲ್ ಅಕ್ಕಿ ಖರೀದಿಸುತ್ತಾನೆ…ಅಂದ್ರೆ 100 ಕೆಜಿಗೆ 1200 ರೂ. ಆಗುತ್ತದೆ…ಇದು ಕೇವಲ ಒಂದು ಹಳ್ಳಿಯ ಕನಿಷ್ಠ ಲೆಕ್ಕ…ಒಟ್ಟಾರೆ ಒಂದು ಬಾರಿ ಸರಕಾರ ಅಕ್ಕಿ ನೀಡಿದರೆ ಕನಿಷ್ಠ 50 ಟನ್ ಅಕ್ಕಿ ಅಕ್ರಮವಾಗಿ ಸೇಲ್ ಆಗುತ್ತದೆ….ಈ ಅಕ್ಕಿಯನ್ನು ದಂಧೆ ಕೋರರು ಬೆಣ್ಣೆ ದೋಸೆ ಹೋಟೆಲ್, ಮಿಲ್ ಗಳಿಗೆ ಕೆಜಿಗೆ 15 ರೂನಂತೆ ಮಾರಾಟ ಮಾಡುತ್ತಾರೆ.
15 ರೂ.ಪಡಿತರ ಅಕ್ಕಿ, 40 ರೂ. ಬೆಣ್ಣೆ ದೋಸೆ
ಈ ಅಕ್ಕಿಯನ್ನು ಬೆಣ್ಣೆ ದೋಸೆ ಹೋಟೆಲ್ ಗಳು 15 ರೂ.ಗೆ ಖರೀದಿಸಿ..ಹಿಟ್ಟು ಮಾಡಿ ಒಂದು ದೋಸೆಗೆ ನಲವತ್ತು ರೂಪಾಯಿ ವಿಧಿಸುತ್ತಾರೆ…ಅಲ್ಲಿಗೆ ಒಂದು ಕೆಜಿ ಅಕ್ಕಿಗೆ ಕನಿಷ್ಠ 15 ದೋಸೆ ಬರುತ್ತದೆ…ಅಂದ್ರೆ ಒಂದು ದೋಸೆಗೆ ನಲವತ್ತು ರೂಪಾಯಿ ಆದರೆ 15 ದೋಸೆಗೆ 600 ರೂಪಾಯಿ ಆಗುತ್ತದೆ, ಕೆಲಸಗಾರರ ಖರ್ಚು, ಬಾಡಿಗೆ, ಪಲ್ಯ, ಚಟ್ನಿ ಎಲ್ಲವೂ ಸೇರಿ 300 ರೂ. ಖರ್ಚಾದರೆ ಇನ್ನೂ 300 ರೂ.ಹಣ ಒಂದು ಕೆಜಿಗೆ ಉಳಿಯುತ್ತದೆ…ಒಂದು ದಿನಕ್ಕೆ ಒಂದು ಹೋಟೆಲ್ ಕನಿಷ್ಠ 30 ರಿಂದ 50 ಕೆಜಿ ಅಕ್ಕಿ ಬಳಸಿ ಹಿಟ್ಟು ಮಾಡಿ ದೋಸೆ ಮಾರಾಟ ಮಾಡುತ್ತಾರೆ…ಅಲ್ಲಿಗೆ ಒಂದು ಹೋಟೆಲ್ ಕನಿಷ್ಠ ಒಂದು ದಿನಕ್ಕೆ ಮೂರರಿಂದ ಐದು ಸಾವಿರ ಲಾಭ ಮಾಡುತ್ತವೆ…ಅಂದ್ರೆ ತಿಂಗಳಿಗೆ ಸಾಮಾನ್ಯ ಹೋಟೆಲ್ ಮೂವತ್ತು ಸಾವಿರ ರೂಪಾಯಿ ಮಾರಾಟ ಮಾಡಿದರೆ, ಫೇಮಸ್ ಹೋಟೆಲ್ ಲಕ್ಷದ ಮೇಲೆ ಲಾಭ ಮಾಡುತ್ತವೆ….ಆಟೋಗಳಿಗೆ, ಬಸ್, ಪೆಟ್ರೋಲ್ ಹೀಗೆ ಎಲ್ಲದಕ್ಕೂ ದರ ಫಿಕ್ಸ್ ಆದಂತೆ ದೋಸೆಗೂ ದರ ಫಿಕ್ಸ್ ಆಗಿದೆ…ಇನ್ನು ಆಹಾರ ಇಲಾಖೆಯೂ ಈ ಬಗ್ಗೆ ತಲೆಕೆಡಿಸಿಕೊಳ್ಳೋತ್ತಿಲ್ಲ…ಸ್ವಚ್ಛತೆಯೂ ಇಲ್ಲ..ಒಟ್ಟಾರೆ ಸರಕಾರದ ಉಚಿತ ಅಕ್ಕಿ ಬೆಣ್ಣೆ ದೋಸೆ ಹೋಟೆಲ್ ಗಳಿಗೆ ಹೋಗುತ್ತಿದ್ದು, ಗ್ರಾಹಕನ ಜೇಬು ಸುಡುತ್ತಿದೆ.
English Summary: ration rice sale scam in davangere benne dose hotel. Kannada news. Davangere news. Davangere today News.