ದಾವಣಗೆರೆ : ಪ್ರಧಾನಿ ಮೋದಿ ನೋಡಲು ಬಂದಿದ್ದ ರೈತನೊಬ್ಬ ಈರುಳ್ಳಿ ಮಾರಿದ ಹಣವನ್ನು ಕಳೆದುಕೊಂಡಿರುವ ಘಟನೆ ಶನಿವಾರ ನಡೆಯಿತು. ಈ ರೈತ ಮೋದಿ ನೋಡಲು ಜೇಬಿನಲ್ಲಿ ಈರುಳ್ಳಿ ಮಾರಿದ 22,000 ಹಣವನ್ನು ಇಟ್ಟುಕೊಂಡು ಬಂದಿದ್ದಾನೆ. ಮಧ್ಯಾಹ್ನವಾದ ಬಳಿಕ ಸಾಕಷ್ಟು ಜನರು ಬರತೊಡಗಿದ್ದು, ಇವರಲ್ಲಿ ಪಿಕ್‌ಪ್ಯಾಟರ್ ಕೂಡ ಎಂಟ್ರಿಕೊಟ್ಟಿದ್ದಾರೆ.
ಇದೇ ಸಂದರ್ಭವನ್ನು ಕಾಯುತ್ತಿದ್ದ ಕಳ್ಳರು ರೈತನ ಜೇಬಿಗೆ ಕತ್ತರಿ ಹೊಡೆದಿದ್ದಾರೆ. ಇದನ್ನು ಮೊದಲು ನೋಡಿಕೊಳ್ಳದ ರೈತ, ಆಹಾರ ಸಾಮಾಗ್ರಿಯೊಂದನ್ನು ತೆಗೆದುಕೊಳ್ಳಲು ಹೋದಾಗ ಜೇಬಿನಲ್ಲಿ ಹಣ ಇಲ್ಲದೇ ಇರೋದು ಕಂಡು ಬಂದಿದೆ.