Wednesday

26-03-2025 Vol 19

ಲೋಕಿಕೆರೆಯಲ್ಲಿ ಆಕರ್ಷಕ ಕ್ರಿಕೆಟ್ ಮ್ಯಾಚ್: ಟ್ರೋಫಿ ಮುಡಿಗೇರಿಸಿಕೊಂಡ ಸಂತೇಬೆನ್ನೂರು ತಂಡ

ದಾವಣಗೆರೆ : ತಾಲೂಕಿನ ಲೋಕಿಕೆರೆ ಮಾರುತಿ ಕ್ರಿಕೆಟ್ಸ್ ಸಹಯೋಗದಲ್ಲಿ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ಪ್ರಯುಕ್ತ ಮೂರು ದಿನಗಳ ಕಾಲ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿ ತೆರೆ ಕಂಡು ವಿಜೇತ ಕ್ರಿಕೆಟ್ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಪಂದ್ಯಾವಳಿಯಲ್ಲಿ ಸಂತೇಬೆನ್ನೂರು ತಂಡ ಪ್ರಥಮ ಸ್ಥಾನ ಕಂಡಿದ್ದು, 20 ಸಾವಿರ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿದೆ. ಮಾಯಕೊಂಡ ಕ್ಷೇತ್ರದ ಬಿಜೆಪಿಯ ಪ್ರಬಲ ಆಕಾಂಕ್ಷಿ ಜಿ.ಎಸ್. ಶ್ಯಾಮ್ ಈ ಬಹುಮಾನದ ಪ್ರಾಯೋಜಕರಾಗಿದ್ದಾರೆ.

ದ್ವಿತೀಯ ಸ್ಥಾನ ಲೋಕಿಕೆರೆ ತಂಡ ಪಡೆದುಕೊಂಡಿದ್ದು, 12,500 ಸಾವಿರ ರೂ. ನಗದು ಬಹುಮಾನ ಮತ್ತು ಟ್ರೋಫಿ ಮುಡಿಗೆರಿಸಿಕೊಂಡಿದೆ. ಹಿರಿಯ ಬಿಜೆಪಿ ಮುಖಂಡರು, ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ಸದಸ್ಯ ಬಿ.ಟಿ. ಸಿದ್ದಪ್ಪ ಈ ಬಹುಮಾನದ ಪ್ರಾಯೋಜಕರಾಗಿದ್ದಾರೆ. ತೃತೀಯ ಸ್ಥಾನವನ್ನು ಲೋಕಿಕೆರೆ ಸೈಟ್ ತಂಡ ಪಡೆದಿದ್ದು, 7,500 ಸಾವಿರ ರೂ. ಬಹುಮಾನ ಮತ್ತು ಆಕರ್ಷಕ ಟ್ರೋಫಿ ಪಡೆದಿದೆ. ಜಿ.ಎಸ್. ರಾಘವೇಂದ್ರ ಈ ಬಹುಮಾನದ ಪ್ರಾಯೋಜಕರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ರಿಕೆಟ್ ಪಂದ್ಯಾವಳಿ ಪ್ರಾಯೋಜಿತರಾದ ಬಿ.ಟಿ. ಸಿದ್ದಪ್ಪ, ಲೋಕಿಕೆರೆ ತಾಲ್ಲೂಕು ಪಂಚಾಯಿತಿ ಸದಸ್ಯ ಸಿ.ಗುರುಮೂರ್ತಿ, ಬಿಜೆಪಿ ಮಾಯಕೊಂಡ ಬ್ಲಾಕ್ ಎಸ್ ಟಿ ಮೊರ್ಚಾ ಅಧ್ಯಕ್ಷ ಪ್ಯಾಟಿ ಹನುಮಂತಪ್ಪ, ಯುವ ಮುಖಂಡ ಬಿಜೆಪಿ ಮಾಯಕೊಂಡ ಬ್ಲಾಕ್ ಎಸ್ ಟಿ ಮೊರ್ಚಾ ಉಪಾಧ್ಯಕ್ಷ ಆರ್. ರಾಮಸ್ವಾಮಿ, ಮುಖಂಡರಾದ ಪವಾಡ ರಂಗನಹಳ್ಳಿ ಶಿವಣ್ಣ, ಶಾಂತಪ್ಪ, ಲೋಕಿಕೆರೆ ಟಿ.ಸಿ. ಮೂರ್ತಿ, ವಿಜೇತ ಕ್ರಿಕೆಟ್ ತಂಡಗಳಿಗೆ ಪ್ರಶಸ್ತಿ, ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಿದರು. ಪತ್ರಕರ್ತ ಪುರಂದರ್ ಲೋಕಿಕೆರೆ ಪ್ರಾಸ್ತಾವಿಕ ಮತ್ತು ನಿರೂಪಣೆ ಮಾಡಿದರು.

ಮೂರು ದಿನಗಳ ಈ ಪಂದ್ಯದಲ್ಲಿ ಸ್ಥಳೀಯ ಯುವಕರು ಗ್ರಾಮಸ್ಥರ ಹಿರಿಯರ ಸಹಕಾರದಿಂದ ಯುವ ಮುಖಂಡ ಆರ್. ರಾಮಸ್ವಾಮಿ ಅಚ್ಚುಕಟ್ಟಾಗಿ ನಿರ್ವಹಿಸಿದರು. ಪಂದ್ಯದ ಯಾಶಸ್ವಿಗೆ ಶ್ರಮಿಸಿದ ಅತಿಥಿಗಳು, ಪ್ರಾಯೋಜಿತರಿಗೆ ಸನ್ಮಾನಿಸಿ ಗೌರವಿಸಲಾಯಿತು.

 

Davanagere Live

Leave a Reply

Your email address will not be published. Required fields are marked *