ಹೊನ್ನಾಳಿ : ಕೇಂದ್ರ ಸರಕಾರದ ಬಜೆಟ್ ರೈತರ ಪರವಿಲ್ಲ, ಗೊಬ್ಬರ ದರ ಏರಿದೆ. ಮಾಂಗಲ್ಯಸರ ಮಾಡಿಸೋದಕ್ಕೆ ಆಗೋದಿಲ್ಲ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ.ಜೆ.ಆರ್.ಷಣ್ಮುಖಪ್ಪ ಹೇಳಿದ್ದಾರೆ.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿರುವ ಶೇ.70 ರಷ್ಟು ರೈತಾಪಿ ವರ್ಗದ ಜನರಿಗೆ ಕೇಂದ್ರ ಸರಕಾರದ ಈ ಬಾರಿಯ ಬಜೆಟ್ ನಿರಾಸೆ ಮೂಡಿಸಿದೆ ಎಂದು ಹೇಳಿದ್ದಾರೆ.
ಬುಧವಾರ ಮಂಡನೆಯಾದ 20-23 ನೇ ಸಾಲಿನ ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಆದಾಯ ತೆರಿಗೆ ಮಿತಿ ಹೆಚ್ಚಳ ಮಾಡಿರುವುದು ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಘೋಷಣೆ ಹೊರತು ಪಡಿಸಿ ಬಜೆಟ್ ಉಳಿದೆಲ್ಲ ಅಂಶಗಳು ನಿರಾಶದಾಯಕವಾಗಿವೆ ಎಂದು ಹೇಳಿದ್ದಾರೆ.
ಮೈಮೇಲೆ ಇದ್ದರೆ ಮಾತ್ರ ಚಿನ್ನಘಿ, ಆದರೆ ಕಷ್ಟ ಬಂದಾಗ ಅದುವೆ ಚೆನ್ನಘಿ, ಪ್ರತಿಯೊಂದು ಮನೆಯಲ್ಲಿಯೂ ಹೆಣ್ಣು ಮಕ್ಕಳಿಗೆ ಚಿನ್ನದ ಮೇಲೆ ಆಸೆ ಇರುತ್ತದೆ. ಈಗಿನ ಕಾಲದಲ್ಲಿ ಜನರು ಕಷ್ಟವೆಂದಾಗ ಹಣ ಕೊಡುವುದಿಲ್ಲಘಿ. ಆಗ ನಮ್ಮಲ್ಲಿರುವ ಚಿನ್ನವೇ ಆಪಂತ್ಬಾದವ. ಇದನ್ನು ಇಟ್ಟು ಹಣ ಪಡೆಯಬಹುದು. ಪ್ರತಿಯೊಬ್ಬ ಮಹಿಳೆಯು ಮಾಂಗಲ್ಯ ಸರ ಮಾಡಿಸಬೇಕೆಂಬ ಆಸೆ ಪಡುತ್ತಾರೆ. ಆದರೆ ಈ ಬಜೆಟ್‌ನಿಂದ ಅದು ಅವಕಾಶವಿಲ್ಲದಂತಾಗಿದೆ.
ಬಡ ಮತ್ತು ಮಧ್ಯಮ ವರ್ಗದ ಗೃಹಿಣಿಯರು, ಹೆಣ್ಣು ಮಕ್ಕಳು ಬಂಗಾರದ ಆಭರಣಗಳ ಮೇಲಿನ ಆಸೆಯನ್ನೆ ಬಿಡುವಂತಾಗಿದೆ. ಈಗಲೇ ಪ್ರತಿ ಗ್ರಾಂ ಬಂಗಾರದ ಬೆಲೆ 54 ಸಾವಿರ ಏರಿಕೆಯಾಗಿದೆ. ಇದೀಗ ಬಜೆಟ್‌ಲ್ಲಿ ಮತ್ತೆ ಏರಿಕೆ ಮಾಡಿರುವುದು ಈ ವರ್ಗದ ಮಹಿಳೆಯರು ಚಿನ್ನದ ಮೇಲಿನ ಆಸೆ ಕೈ ಬಿಡುವಂತೆ ಆಗಿದೆ.
ಇನ್ನು ಡಿಎಪಿ, ಪೊಟ್ಯಾಷ್ ಸೇರಿದಂತೆ ಅಗತ್ಯ ರಸಗೊಬ್ಬರಗಳ ದರ ಗಗನಕ್ಕೆ ಏರಿಕೆಯಾಗಿದೆ. ಮತ್ತೊಂದು ಕಡೆ ರೈತರ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ಇಲ್ಲವಾಗಿದೆ. ಕೃಷಿಯನ್ನು ವಿಶೇಷವಾಗಿ ಪರಿಗಣಿಸಿ ರಸಗೊಬ್ಬರಗಳ ಮೇಲಿನ ಸಬ್ಸಿಡಿ ಹೆಚ್ಚಳ ಮಾಡಬೇಕಿತ್ತು. ಕೃಷಿಯನ್ನು ಕೈಗಾರಿಕೆ ಎಂದು ಪರಿಗಣಿಸಬೇಕಿತ್ತು. ಅಷ್ಟೇ ಅಲ್ಲದೇ ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಪ್ರಕಟಿಸಬೇಕಿತ್ತು. ಆದರೆ ಇದ್ಯಾವುದು ಇಲ್ಲ ಎಂದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ.ಜೆ.ಆರ್.ಷಣ್ಮುಖಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಇದು ಜನ ಸಾಮಾನ್ಯರಿಗೆ ಪೂರಕವಾದ ಬಜೆಟ್ ಅಲ್ಲ ಎಂದು ಅವರು ಹೇಳಿದ್ದಾರೆ.
English Summary: J.R. shanmukhappa davangere on union budget 2023