Honnali: ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಹೋಬಳಿಯ ಐನೂರು ಗ್ರಾಮದ ಸಮೀಪ ಟ್ಯಾಕ್ಟರ್ ಅಪಘಾತದಲ್ಲಿ ಚಾಲಕ ಮೃತಪಟ್ಟಿದ್ದಾನೆ. ಐನೂರು ಸಮೀಪ ಚಲಿಸುತ್ತಿದ್ದ ಟ್ರ‍್ಯಾಕ್ಟರ್ ಭತ್ತದ ಗದ್ದೆಗೆ ಸೋಮವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಟ್ಯಾಕ್ಟರ್ ಚಲಾಯಿಸುತ್ತಿದ್ದ ಗಣೇಶ್ (22) ಟ್ಯಾಕ್ಟರ್ ಕೆಳಭಾಗಕ್ಕೆ ಸಿಕ್ಕಿ ಮತಪಟ್ಟಿದ್ದಾರೆ.
ಮೃತ ವ್ಯಕ್ತಿ ಹೋಬಳಿಯ ಹನಗವಾಡಿ ಗ್ರಾಮದವರು ಗಣೇಶ್ ಎಂದು ಗುರುತಿಸಲಾಗಿದೆ. ಟ್ರಾö್ಯಕ್ಟರ್ ಮಾಲೀಕ ಸಾಸ್ವೆಹಳ್ಳಿ ಗ್ರಾಮದವರೆಂದು ತಿಳಿದಿದೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
English Summary: Honnali, Sasvehalli Ainuru, Accident, Davangere Live, Davangere News, Davangere, Kannada News