Wednesday

26-03-2025 Vol 19

ದಾವಣಗೆರೆ: 50ರಷ್ಟು ರಿಯಾಯಿತಿ ನೀಡಿದರೂ ಕೇವಲ ಮೂರು ದಿನಗಳಲ್ಲಿ 6 ಲಕ್ಷ ದಂಡ ವಸೂಲಿ

 

DAVANAGERE NEWS TODAY | KANNADA NEWS | 07-02-2023

Davanagere: ಪೊಲೀಸ್ ಇಲಾಖೆ ಸಂಚಾರ ನಿಯಮ ದಂಡ ವಸೂಲಿ ಕ್ರಮದಲ್ಲಿ ಇ-ಚಲನ್ ಎಂಬ ನೂತನ ವ್ಯವಸ್ಥೆ ಜಾರಿಗೆ ತಂದಿದ್ದು, ದಂಡ ಪಾವತಿಸುವ ಚಾಲಕರಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

ಶೇ.50ರಷ್ಟು ರಿಯಾತಿ ನೀಡಿದರೂ ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯಲ್ಲಿ ಕೇವಲ ಮೂರು ದಿನಗಳಲ್ಲಿ 6 ಲಕ್ಷ ದಂಡ ವಸೂಲಿಯಾಗಿದೆ. ಸಂಚಾರನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬAಧಿಸಿದAತೆ ಜಿಲ್ಲೆಯಲ್ಲಿ ಮೂರು ದಿನಗಳಲ್ಲಿ ಸುಮಾರು 2400 ಸಂಚಾರಿ ಇ-ಚಲನ್ ಪ್ರಕರಣಗಳಿಗೆ ಸಂಬಧಿಸಿದAತೆ ಸುಮಾರು ಒಟ್ಟು 06 ಲಕ್ಷಕ್ಕೂ ಹೆಚ್ಚು ದಂಡವನ್ನು ಸಾರ್ವಜನಿಕರು ಪಾವತಿಸಿದ್ದಾರೆ.

ಸಂಚಾರಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ಇರುವ ಹಿನ್ನೆಲೆಯಲ್ಲಿ ಜನರು ದಂಡ ಪಾವತಿಸಿದ್ದಾರೆ.

ಸಾರ್ವಜನಿಕರು ತಮ್ಮ ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣಗಳಿಗೆ ಸಂಚಾರಿ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತವನ್ನು ಠಾಣೆಗಳಿಗೆ ಬಂದು ಹಾಗೂ ಆನ್ಲೈನ್ ಪೇಮೆಂಟ್ ಮೂಲಕ ಪಾವತಿಸುತ್ತಿದ್ದಾರೆ.

ಸಾರ್ವಜನಿಕರು ಸದರಿ ಸಂಚಾರಿ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತದಲ್ಲಿ ಶೇ.50% ರಿಯಾಯಿತಿಯಲ್ಲಿ ದಂಡದ ಮೊತ್ತವನ್ನು ಪಾವತಿಸುವ ಆದೇಶದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ವಾಹನಗಳ ಮೇಲೆ ಇರುವ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಚಾರಿ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತವನ್ನು ಹತ್ತಿರದ ದಾವಣಗೆರೆ ನಗರದ ಉತ್ತರ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಮತ್ತು ನಗರದಲ್ಲಿ ವಿವಿಧ ಕಡೆ ಸ್ಥಾಪಿಸಲಾಗಿರುವ ಸಂಚಾರಿ ಇ-ಚಲನ್ ಪಾವತಿ ಸ್ಥಳಗಳಲ್ಲಿ, ಕರ್ನಾಟಕ ಒನ್ ಜಾಲತಾಣ,  ದಾವಣಗೆರೆ ಒನ್ ಮೂಲಕ ಹಾಗೂ ಜಗಳೂರು, ಚನ್ನಗಿರಿ, ಹರಿಹರ, ಹೊನ್ನಾಳಿ, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಪಾವತಿಸುವ ಮೂಲಕ ಇದರ ಸದುಪಯೋಗಪಡೆದುಕೊಳ್ಳಬಹುದಾಗಿದೆ.

English Summary: Davangere Traffic Violation Fine Collection.

Davanagere Live

Leave a Reply

Your email address will not be published. Required fields are marked *