DAVANAGERE NEWS TODAY-01-03-2023
ದಾವಣಗೆರೆ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ತೀವ್ರ ಫೈಟ್ ನಡೆದಿದ್ದು, ಇಲ್ಲಿನ ಕಬ್ಬೂರು ಬಸಪ್ಪ ನಗರದಲ್ಲಿ ಸೋಮವಾರ ರಾತ್ರಿ ಕಾರ್ಮಿನ ಕೊಲೆಯಾಗಿದೆ.
ಕಾರ್ಮಿಕ ಪ್ರಶಾಂತ (29) ಕೊಲೆಯಾದ ವ್ಯಕ್ತಿ. ಅನೈತಿಕ ಸಂಬಂಧದಿಂದ ಕೊಲೆ ನಡೆದಿರಬಹುದು ಎಂದು ಪೆÇಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಶಾಂತ್ ಹಾಗೂ ಆರೋಪಿಯ ನಡುವೆ ವೈಷಮ್ಯವಿತ್ತು. ಸೋಮವಾರ ಸಂಜೆ ಎಲವಟ್ಟಿ ಬಳಿಯ ರೈಸ್‍ಮಿಲ್ ಬಳಿ ಜಗಳವಾಗಿ ಆರೋಪಿಯು ಪ್ರಶಾಂತ ಅವರ ತಲೆಗೆ ಕಟ್ಟಿಗೆಯಿಂದ
ಬಲವಾಗಿ ಹೊಡೆದಿದ್ದರಿಂದ ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ. ರೈಸ್ ಮಿಲ್ ಪಕ್ಕದ ಜಾಲಿ ಗಿಡದ ಬಳಿ ಪ್ರಶಾಂತ್ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಭೇಟಿ ನೀಡಿದರು. ಆರ್‍ಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.