Davangere News Today | Kannada
ದಾವಣಗೆರೆ ಲೈವ್: ಅಚ್ಚರಿಯ ಬೆಳವಣಿಗೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಹರಿಹರ ತಾಲೂಕಿನ ಹೊಳೆಸಿರಿಗೆರೆಯ ಬಿ.ಹಾಲೇಶಪ್ಪ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಚಂದ್ರಶೇಖರ್ ನಿಧನದ ಹಿನ್ನೆಲೆಯಲ್ಲಿ ಶಾಸಕ ಎಸ್.ವಿ.ರಾಮಚಂದ್ರರನ್ನು ಕೋ ಅಪ್ ಮಾಡಿ ನಿರ್ದೇಶಕರನ್ನಾಗಿ ಮಾಡಲಾಗಿತ್ತುಘಿ. ಚುನಾವಣೆ ಹತ್ತಿರ ಬರುವ ಹಿನ್ನೆಲೆಯಲ್ಲಿ ಎಸ್.ವಿ.ರಾಮಚಂದ್ರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಂಭವ ಹೆಚ್ಚಿತ್ತು.
ಪ್ರತಿಷ್ಠೆಯ ಡಿಸಿಸಿ ಬ್ಯಾಂಕ್ ಪ್ರಸ್ತುತ ಆಡಳಿತಾರೂಢ ಬಿಜೆಪಿ ತೆಕ್ಕೆಯಲ್ಲಿದೆ. 2020 ಡಿಸೆಂಬರ್‌ನಲ್ಲಿ ಕಾಂಗ್ರೆಸ್‌ನಿಂದ ಆಡಳಿತವನ್ನು ಬಿಜೆಪಿ ಕಸಿದುಕೊಂಡಿತ್ತುಘಿ. 2018-2019ರಲ್ಲಿ ಒಟ್ಟು 9 ಚುನಾಯಿತ ನಿರ್ದೇಶಕರಲ್ಲಿ 7 ಕಾಂಗ್ರೆಸ್ ನಿರ್ದೇಶಕರಿದ್ದರು. ಆಗ ಜೆ.ಆರ್.ಷಣ್ಮುಖಪ್ಪ ಅಧ್ಯಕ್ಷರಾಗಿದ್ದರು. ಜೆ.ಆರ್.ಷಣ್ಮುಖಪ್ಪಘಿ, ಶ್ರೀನಿವಾಸ್ ಶೆಟ್ರುಘಿ, ಬಿ.ವಿ.ಚಂದ್ರಶೇಖರ್ ಹೊರತುಪಡಿಸಿ ಉಳಿದ ನಾಲ್ಕು ನಿರ್ದೇಶಕರು ಬಿಜೆಪಿಗೆ ಸೇರಿದ್ದರು.
ಇನ್ನು ಅಧಿಕಾರ ಹಂಚಿಕೆ ಒಡಂಬಡಿಕೆಯಂತೆ ವೇಣುಗೋಪಾಲ ರೆಡ್ಡಿ ರಾಜೀನಾಮೆ ನೀಡಿದ್ದರು. ಅವರು ತೆರವಾಗಿದ್ದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಿ.ಹಾಲೇಶಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಬಿ.ಹಾಲೇಶಪ್ಪ ಅವರ ನಾಮಪತ್ರಕ್ಕೆ ಬ್ಯಾಂಕಿನ ಸದಸ್ಯ ಜಗದೀಶಪ್ಪ ಬಣಕಾರ್ ಅನುಮೋದಕರಾಗಿ ಮತ್ತು ಬಿ.ಶೇಖರಪ್ಪ ಸೂಚಕರಾಗಿದ್ದರು.
ಅಂತಿಮವಾಗಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ದೂಡಾ ಆಯುಕ್ತ ಬಿ.ಟಿ.ಕುಮಾರಸ್ವಾಮಿ ಅವರು ಬಿ.ಹಾಲೇಶಪ್ಪ ಅವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಬ್ಯಾಂಕಿನ ಹಿರಿಯ ಸದಸ್ಯ ಡಾ.ಜೆ.ಆರ್.ಷಣ್ಮುಖಪ್ಪ, ವೇಣುಗೋಪಾಲ ರೆಡ್ಡಿ,ಆರ್.ಜಿ.ಶ್ರೀನಿವಾಸ ಮೂರ್ತಿ, ಟಿ.ಟಿ.ಜಯಪ್ರಕಾಶ್, ಎಚ್.ಅನ್ನಪೂರ್ಣ, ಎಚ್.ದಿವಾಕರ್, ಕೆ.ಎಚ್.ಷಣ್ಮುಖಪ್ಪ, ಜಿ.ಎನ್.ಸ್ವಾಮಿ, ಎಚ್.ಕೆ.ಪಾಲಾಕ್ಷಪ್ಪ, ಜಿ.ಮುರುಗೇಂದ್ರಪ್ಪ ಮತ್ತು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತ್ಯಾವರನಾಯ್ಕ ಉಪಸ್ಥಿತರಿದ್ದರು.
ದಾವಣಗೆರೆ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಹಾಲೇಶಪ್ಪ
ಹಾಲೇಶಪ್ಪ ಹರಿಹರ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿದ್ದು, ವಿಶ್ವ ಬಂಧು ಕ್ರೆಡಿಟ್ ಸೊಸೈಟಿಯಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಈ ಎಲ್ಲ ಅನುಭವ ಇರುವ ಕಾರಣ ಉತ್ತಮ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ. ಆದ್ದರಿಂದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ್ನು ರಾಜ್ಯದಲ್ಲಿ ಒಂದು ಉತ್ತಮ ಬ್ಯಾಂಕ್ ಆಗುವಂತೆ ಕಾರ್ಯನಿರ್ವಹಿಸಲಿ.
-ಜೆ.ಆರ್.ಷಣ್ಮುಖಪ್ಪ , ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ
ಡಿಸಿಸಿ ಬ್ಯಾಂಕ್‌ನ ನಿರ್ದೇಶಕರ ಬಲಾ ಬಲ
- ಬಿಜೆಪಿ ಬೆಂಬಲಿತ – 7
- ಕಾಂಗ್ರೆಸ್-2
- ನಾಮ ನಿರ್ದೇಶಿತ-4
- ಕಾಂಗ್ರೆಸ್ ನಿರ್ದೇಶಕರು
- ಶ್ರೀನಿವಾಸ್ ಶೆಟ್ರು
- ಜೆ.ಆರ್.ಷಣ್ಮುಖಪ್ಪ
- ಬಿಜೆಪಿ ನಿರ್ದೇಶಕರು
- ಎಸ್.ವಿ.ರಾಮಚಂದ್ರಪ್ಪ
- ಜಗದೀಶಪ್ಪ ಬಣಕಾರ್
- ಕೆಂಗನಹಳ್ಳಿ ಷಣ್ಮುಖಪ್ಪ
- ವೇಣುಗೋಪಾಲ್ ರೆಡ್ಡಿ
- ದ್ಯಾಮೇನಹಳ್ಳಿ ಶೇಖರಪ್ಪ
- ಹಾಲೇಶಪ್ಪ ಹೊಳೆಸಿರಿಗೆ
- ಜಿ.ಎನ್.ಸ್ವಾಮಿ