ದಾವಣಗೆರೆ: ಪ್ರಧಾನಿ ಮೋದಿ ಒಂದೂ ದಿನ ರೆಸ್ಟ್ ತೆಗೆದುಕೊಳ್ಳದೇ ದೇಶಕ್ಕಾಗಿ ದುಡಿಯುತ್ತಿದ್ದಾರೆ. ಈ ಕಾರಣದಿಂದ ನಾನು ವಯಸ್ಸು ಎಂಭತ್ತಾದ್ರೂ ನಾನು ರೆಸ್ಟ್ ಮಾಡೋದಿಲ್ಲ ಎಂದು ರಾಜಾಹುಲಿ ಎಂದೇ ಕರೆಯಲ್ಪಪಡುವ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ಜಿಎಂಐಟಿ ಕಾಲೇಜಿನ ಪಕ್ಕದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬಿಜೆಪಿಗಾಗಿ ನಾನು ದುಡಿಯಲಿದ್ದುಘಿ, ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವುದು ನಮ್ಮ ಮುಖ್ಯ ಗುರಿ. ನನಗೆ 80 ವರ್ಷ ವಯಸ್ಸಾಗಿದ್ದರೂ, ವಿಶ್ರಾಂತಿ ಪಡೆಯೋದಿಲ್ಲ. ನಾನು ಮನೆ ಮನೆಗೆ ತೆರಳಿ ಬಿಜೆಪಿ ಗೆಲ್ಲಿಸುವ ಕೆಲಸ ಮಾಡುತ್ತೇನೆ. ಇದಕ್ಕಾಗಿ ನಿಮ್ಮ ಸಹಕಾರ ಅಗತ್ಯವಿದೆ. ಇನ್ನು ಈ ಚುನಾವಣೆ ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲೂ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ನೀವೆಲ್ಲಾ ಆಶೀರ್ವಾದ ನೀಡಬೇಕೆಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ಎಲ್ಲರ ಶ್ರಮ ಅಗತ್ಯವಿದೆ. ಇದಕ್ಕೆ ಕಾರ್ಯಕರ್ತರೇ ಜೀವಾಳ, ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಆಡಳಿತ ಅಭಿವೃದ್ಧಿ ತಲುಪಿಸಿ. ಈ ಮೂಲಕ ಸ್ಪಷ್ಟ ಬಹುಮತದ ಮೂಲಕ ಅಧಿಕಾರಕ್ಕೆ ಬರಲು ನೀವೆಲ್ಲ ಕೈಜೋಡಿಸಬೇಕು ಎಂದರು.
ಕಡುಬು ತಿನ್ನುತ್ತೀದ್ದೀರಾ ? :
70 ವರ್ಷ ಕಾಂಗ್ರೆಸ್ ಕಡುಬು ತಿಂತಾ ಇದ್ದೀರಾ. ಸುಳ್ಳು ಭರವಸೆ ನೀಡಿ ಕಾಂಗ್ರೆಸ್ ಜನರನ್ನು ಮೋಸ ಮಾಡುತ್ತಿದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ. ಅಧಿಕಾರ, ಹಣ, ಹೆಂಡದ ಬಲ ಇದ್ದರೆ ಸಾಕು ಅಧಿಕಾರಕ್ಕೆ ಬರಬಹುದೆಂಬ ಕಾಲವಿತ್ತುಘಿ. ಆದರೀಗ ಇಡೀ ವಿಶ್ವವೇ ಪ್ರಧಾನಿ ಮೋದಿ ಆಡಳಿತ ಮೆಚ್ಚಿಕೊಂಡಿದೆ. ಇದು ಕೇವಲ ವಿಜಯ ಸಂಕಲ್ಪ ಯಾತ್ರೆ ಮಾತ್ರವಲ್ಲ, ವಿಜಯ ಯಾತ್ರೆಯಾಗಿದೆ. ಕಾಂಗ್ರೆಸ್ ಈಗಾಗಲೇ ಸೋಲೊಪ್ಪಿಕೊಂಡಿದ್ದಾರೆ. ಇದೀಗ ಕಾಂಗ್ರೆಸ್ ಗ್ಯಾರೆಂಟ್ ಕಾರ್ಡ್ ನೀಡುತ್ತಿದೆ. 70 ವರ್ಷದ ಅಧಿಕಾರದಲ್ಲಿರುವ ಕಾಂಗ್ರೆಸ್ ಏನೂ ಮಾಡದೇ ಇದೀಗ ಅನೇಕ ಭರವಸೆ ನೀಡಲು ಹೊರಟಿದೆ. ಆದರೆ ಪ್ರಧಾನಿ ಮೋದಿ ಆಡಳಿತದಲ್ಲಿ ಆತ್ಮನಿರ್ಭರ ಭಾರತ, ಸೌಭಾಗ್ಯ ಯೋಜನೆ, ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಜೀವನ ಭೀಮಾ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಜನರಿಗೆ ನೀಡಿದೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕೇಂದ್ರ ಸರ್ಕಾರ 6,000 ರೂಪಾಯಿ ಕೊಟ್ಟರೆ, ರಾಜ್ಯ ಸರಕಾರ 4,000 ರೂಪಾಯಿ ನೀಡಿ ಒಟ್ಟು 10,000 ರೂಪಾಯಿ ಕೊಡುತ್ತಿದೆ ಎಂದು ಬಿಎಸ್‌ವೈ ಹೇಳಿದರು.