Wednesday

26-03-2025 Vol 19

ಪತ್ರಕರ್ತನ ವಶ ಪ್ರಕರಣ: ಭದ್ರತೆಗಿದ್ದ ಬ್ಯಾರಿಕೇಡ್ ದಾಟಿ ಬಂದಿದ್ದೇಕೆ: ಎಸ್ಪಿ ಸಿ.ಬಿ.ರಿಷ್ಯಂತ್ ಪ್ರಶ್ನೆ

ದಾವಣಗೆರೆ : ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ವೇಳೆ ಪತ್ರಕರ್ತರೊಬ್ಬರನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂಬ ವಿಷಯಕ್ಕೆ ದಾವಣಗೆರೆ ಎಸ್ಪಿ ರಿಷ್ಯಂತ್ ಸ್ಪಷ್ಟನೆ ನೀಡಿದ್ದಾರೆ..

ಪ್ರಧಾನಿ ಮೋದಿ ಬರುವ ಹಿನ್ನೆಲೆಯಲ್ಲಿ ಮೊದಲು ನಮಗೆ ಭದ್ರತೆ ಮುಖ್ಯವಾಗಿರುತ್ತದೆ. ಸಾಕಷ್ಟು ಜನ ಬಂದಿದ್ದರು. ಜನ ನಿಯಂತ್ರಣ ಮಾಡುವುದು ಕಷ್ಟವಾಗಿತ್ತು. ಆಗ ಅನಿವಾರ್ಯವಾಗಿ ಲಾಠಿ ಬೀಸಬೇಕಾಯಿತು. ಆದರೆ ಯಾರಿಗೂ ಒಡೆದಿಲ್ಲ..ಈ ಸಂದರ್ಭದಲ್ಲಿ ಅಲ್ಲೆ ಇದ್ದ ಪತ್ರಕರ್ತರೊಬ್ಬರು ಬ್ಯಾರಿಕೇಡ್ ದಾಟಿ ವಿಡಿಯೋ ಮಾಡಿದರು. ಈ ಸಂದರ್ಭದಲ್ಲಿ ಅನಿವಾರ್ಯವಾಗಿ ಅವರನ್ನು ವಶಕ್ಕೆ ಪಡೆಯಬೇಕಾಯಿತು.

ಸಾಮಾನ್ಯವಾಗಿ ಭದ್ರತೆ ದೃಷ್ಟಿಯಿಂದ ಯಾರನ್ನು ಬ್ಯಾರಿಕೇಡ್ ಒಳಗೆ ಬಿಡೋದಿಲ್ಲ..ಅವರಿಗೊಬ್ಬರಿಗೆ ಬಿಟ್ಟರೆ ಉಳಿದ ಪತ್ರಕರ್ತರಿಗೂ ಬಿಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅವರನ್ನು ವ್ಯಾನ್ ನಲ್ಲಿ ಕೂರಿಸಬೇಕಾದ ಸಂದರ್ಭ ಬರಬೇಕಾಯಿತು. ಬೇಕೆಂತ ಈ ರೀತಿ ಮಾಡಿಲ್ಲ. ಪತ್ರಕರ್ತರ ಮೇಲೆ ನನಗೂ ಗೌರವವಿದೆ..ಆ ಗೌರವವನ್ನು ಅವರೂ ಉಳಿಸಿಕೊಳ್ಳಬೇಕು ಎಂದು ಎಸ್ಪಿ ಹೇಳಿದರು.

ಪ್ರತಿಯೊಬ್ಬರಿಗೂ ಅವರದ್ದೇ ಆದ ಗೌರವ ಇರುತ್ತದೆ. ನನಗೂ ನನ್ನದೇ ಆದ ಗೌರವವಿದೆ. ನಾನು ನಿಂತುಕೊಂಡು ಮಾತನಾಡುತ್ತಿದ್ದೀರೇ, ಅವರು ಕಾಲ್ ಮೇಲೆ ಕಾಲು ಹಾಕಿಕೊಂಡು ಅಗೌರವಯುತವಾಗಿ ನಡೆದುಕೊಳ್ಳುತ್ತಿದ್ದರು. ಇದು ಎಷ್ಟು ಸರಿ ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ಸ್ಪಷ್ಟಪಡಿಸಿದ್ದಾರೆ..

ನಾನು ಕಾನೂನು ಮೀರಿ ಹೋಗಿಲ್ಲ. ಕಾನೂನು ಚೌಕಟ್ಟಿನಲ್ಲಿಯೇ ಕೆಲಸ ಮಾಡಿದ್ದೇನೆ ಹೊರತು ಕಾನೂನು ಬಿಟ್ಟು ಮಾಡಿಲ್ಲ. ಮೊದಲನೇಯದಾಗಿ ಬ್ಯಾರಿಕೇಡ್ ಬಿಟ್ಟು ಬಂದಿದ್ದು ತಪ್ಪು. ಹೊರಗಡೆ ಏನುಬೇಕಾದರೂ ತೆಗೆದುಕೊಳ್ಳಿ ಅದಕ್ಕೆ ನನ್ನ ತಕರಾರು ಇಲ್ಲ. ಹಾಗಂತ ಕಾನೂನು ಮೀರಿದರೆ ಯಾರನ್ನೂ ಬಿಡೋದಿಲ್ಲ ಎಂಬುದು ಎಸ್ಪಿ ಸಿ.ಬಿ.ರಿಷ್ಯಂತ್ ವಾದ.

Davanagere Live

Leave a Reply

Your email address will not be published. Required fields are marked *