Wednesday

26-03-2025 Vol 19

ಕದ್ದು ಮದ್ಯ ಮಾರಾಟ ಮಾಡಿದರೆ ಹುಷಾರ್; ಅಬಕಾರಿ ಇಲಾಖೆ ಖಡಕ್ ವಾರ್ನಿಂಗ್

ದಾವಣಗೆರೆ: 2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಏಪ್ರಿಲ್ ಅಥವಾ ಮೇ ತಿಂಗಳುಗಳಲ್ಲಿ ನಡೆಯಲಿದ್ದು, ಚುನಾವಣಾ ಸಮಯದಲ್ಲಿ ಮತದಾರರನ್ನು ಸೆಳೆಯಲು ಅಥವಾ ಓಲೈಸುವ ಸಲುವಾಗಿ ಕಳಪೆ ಗುಣಮಟ್ಟದ ನಕಲಿ ಮದ್ಯ ಮತ್ತು ಕಳ್ಳಬಟ್ಟಿ, ಸಾರಾಯಿ ಮಾರಾಟ ಮಾಡುವ ದಂಧೆ ಹೆಚ್ಚಲಿದೆ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಇದಕ್ಕೆ ಬ್ರೇಕ್ ಹಾಕಲು ಅಬಕಾರಿ ಇಲಾಖೆ ಸಿದ್ಧತೆ ನಡೆಸಿದೆ.

ಅಬಕಾರಿ ಅಕ್ರಮಗಳನ್ನು ತಡೆಗಟ್ಟಿ ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ಸಲುವಾಗಿ ವ್ಯಾಪ್ತಿಯ ಅಬಕಾರಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಸಾರ್ವಜನಿಕರಿಗೆ ತಿಳಿಸಲಾಗಿದೆ. ಅಲ್ಲದೇ ಇಂತಹ ಕೃತ್ಯಕ್ಕೆ ಸಂಬAಧಿಸಿದAತೆ ಜಿಲ್ಲೆಯ ಅಬಕಾರಿ ಇಲಾಖೆಯ ಟೋಲ್ ಪ್ರಿ ನಂ. 18004250379 ಗೆ ಮಾಹಿತಿ ನೀಡಬೇಕೆಂದು ಹಾಗೂ ಇಲಾಖೆಯ ಜಿಲ್ಲಾ, ಉಪ ವಿಭಾಗ, ವಲಯ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಕಂಟ್ರೋಲ್ ರೂಂ ಸ್ಥಿತಿ ದೂರವಾಣಿ ಹಾಗೂ ಅಧಿಕಾರಿಗಳ ಮೊಬೈಲ್ ನಂಬರಿಗೆ ದೂರುನೀಡಬಹುದು. ಮಾಹಿತಿದಾರರ ಹೆಸರು ಇತ್ಯಾದಿ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಇಲಾಖೆ ತಿಳಿಸಿದೆ.

ಜಿಲ್ಲಾ ಅಬಕಾರಿ ಉಪ ಆಯುಕ್ತರ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08192-230921, ಮೊ.ಸಂ 9449597061, 9449597063, ಜಿಲ್ಲಾ ಅಬಕಾರಿ ಉಪ ಅಧೀಕ್ಷಕರ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08192-225042,ಮೊ.ಸಂ 9449597064, 9449597065, ಹೊನ್ನಾಳಿ ಅಬಕಾರಿ ಉಪ ಅಧೀüಕ್ಷಕರ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08188-295202, ಮೊ.ಸಂ 9449597066, 9449597067, ದಾವಣಗೆರೆ ವಲಯ ನಂ-1 ಅಬಕಾರಿ ನಿರೀಕ್ಷಕರ ದೂ.ಸಂ 08192-224177, ದಾವಣಗೆರೆ ವಲಯ ನಂ-2 ಅಬಕಾರಿ ನಿರೀಕ್ಷಕರ ದೂ.ಸಂ 08192-221150, ಹರಿಹರ ವಲಯ ಅಬಕಾರಿ ನಿರೀಕ್ಷಕರ ದೂ.ಸಂ 08192-242166, ಚನ್ನಗಿರಿ ವಲಯ ಅಬಕಾರಿ ನಿರೀಕ್ಷಕರ ದೂ.ಸಂ 08189-295445, ಹೊನ್ನಾಳಿ ವಲಯ ಅಬಕಾರಿ ನಿರೀಕ್ಷಕರ ದೂ.ಸಂ 08188-295315 ಗೆ ಕರೆಮಾಡಿ ದೂರು ನೀಡಬಹುದೆಂದು ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿ ಬಿ ಶಿವಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Davanagere Live

Leave a Reply

Your email address will not be published. Required fields are marked *