Wednesday

26-03-2025 Vol 19

ದ್ವಿತೀಯ ಪಿಯುಸಿ ಫಲಿತಾಂಶ: ಮರು ಮೌಲ್ಯಮಾಪನದಲ್ಲಿ ಹೆಚ್ಚು ಅಂಕ ಗಳಿಸಿ ದಾವಣಗೆರೆ ಟಾಪರ್ ಆದ ಅಂಶಿಕ್

ದಾವಣಗೆರೆ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಡಿಮೆ ಅಂಕ ಬಂದಿವೆ ಎಂದು ಮರು ಮೌಲ್ಯಮಾಪಕ್ಕೆ ಅರ್ಜಿ ಹಾಕಿದ್ದ ವಿದ್ಯಾರ್ಥಿ ಇಂದು ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾನೆ.

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಂಶಿಕ್ 593 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ್ದಾನೆ. ಚನ್ನಗಿರಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಖ್ಯಾತ ಮಕ್ಕಳ ತಜ್ಞ ಡಾ.ಅಶೋಕ್ ಅವರ ಪುತ್ರ.

ಅಂಶಿಕ್‌ಗೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಫಲಿತಾಂಶದಲ್ಲಿ 588 ಅಂಕ ಬಂದಿದ್ದವು. ಇದರಿಂದ ಅಂಶಿಕ್‌ಮರು ಮೌಲ್ಯಮಾಪಕ್ಕೆ ಅರ್ಜಿ ಹಾಕಿದ್ದು, ಮರು ಮೌಲ್ಯ ಮಾಪನದಲ್ಲಿ 5 ಅಂಕಗಳು ಹೆಚ್ಚುವರಿ ಲಭಿಸಿದ್ದು, 593 ಅಂಕಗಳು ಗಳಿಸಿದ್ದಾನೆ. ಈ ಮೂಲಕ ಜಿಲ್ಲೆಯಲ್ಲಿಯೇ ಪ್ರಥಮಸ್ಥಾನ ಪಡೆದ ವಿದ್ಯಾರ್ಥಿ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ.

ದಾವಣಗೆರೆ ನ್ಯೂಸ್, ದಾವಣಗೆರೆ ಸುದ್ದಿ, ಪಿಯುಸಿ ಫಲಿತಾಂಶ, ಕನ್ನಡ ಸುದ್ದಿ, ಕನ್ನಡ ನ್ಯೂಸ್, Davangere News, Davangere News, PUC Result, Kannada News, Kannada News,

Davanagere Live

Leave a Reply

Your email address will not be published. Required fields are marked *